Publish Date: Fri, 29 Sep 2017 (10:13 IST)
Updated Date: Fri, 29 Sep 2017 (10:15 IST)
ಬೆಂಗಳೂರು: ಕೊನೆಯ ಐದು ಓವರ್ ಗಳಲ್ಲಿ ಗೆಲುವಿಗೆ 50 ಪ್ಲಸ್ ರನ್ ಗಳಿದ್ದಾಗ ಕ್ರೀಸ್ ಗೆ ಬಂದ ಧೋನಿ ಕಮಾಲ್ ಮಾಡುತ್ತಾರೆ ಎಂಬ ಅಭಿಮಾನಿಗಳ ನಿರೀಕ್ಷೆ ಸುಳ್ಳಾಯಿತು.
ಧೋನಿ ಮೊದಲು ಗೆಲುವಿನ ರನ್ ಗಳಿಸುವ ಧಾವಂತದಲ್ಲಿದ್ದರೂ ನಂತರ ಪರದಾಡಿದರು. ಇದರ ನಡುವೆ ಸೆಟ್ ಆಗಿದ್ದ ಬ್ಯಾಟ್ಸ್ ಮನ್ ಕೇದಾರ್ ಜಾದವ್ ಔಟಾದರು. ಹೀಗಾಗಿ ಭಾರತ ಆಸ್ಟ್ರೇಲಿಯಾವನ್ನು ಕ್ಲೀನ್ ಸ್ವೀಪ್ ಮಾಡುವ ಕನಸು ಭಗ್ನವಾಯಿತು.
ಇದರೊಂದಿಗೆ ಯಾವುದೇ ಭಾರತ ತಂಡವೂ ಮಾಡಿರದ ಸಾಧನೆಯನ್ನು ಮಾಡಲು ಕೊಹ್ಲಿ ಪಡೆ ವಿಫಲವಾಯಿತು. ಗೆಲುವಿನ ಹೊಸ್ತಿಲಲ್ಲಿ ಟೀಂ ಇಂಡಿಯಾ ಜಾರಿ ಬಿತ್ತು. 335 ರನ್ ಗಳ ಗುರಿ ಬೆನ್ನಟ್ಟುತ್ತಾ ಅಂತಿಮವಾಗಿ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 313 ರನ್ ಗಳಿಸಲಷ್ಟೇ ಶಕ್ತವಾಯಿತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ