Publish Date: Tue, 26 Sep 2017 (10:01 IST)
Updated Date: Tue, 26 Sep 2017 (10:03 IST)
ನವದೆಹಲಿ: ಭಾರತ ತಂಡದ ವಿರುದ್ಧ ಈಗ ಸರಣಿ ಆಡುತ್ತಿರುವ ಸ್ಟೀವ್ ಸ್ಮಿತ್ ನೇತೃತ್ವದ ಆಸ್ಟ್ರೇಲಿಯಾ ತಂಡದಲ್ಲಿ ಹಿಂದೆ ಇದ್ದ ಆಸ್ಟ್ರೇಲಿಯಾ ತಂಡದ ನೆರಳೂ ಕಾಣಿಸಲ್ಲ ಎಂದು ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಖಾಸಗಿ ವಾಹಿನಿಯೊಂದಕ್ಕೆ ಮಾತನಾಡಿದ ಹರ್ಭಜನ್ ಸಿಂಗ್ ತಾವು ಆಡುವಾಗ ಇದ್ದ ಆಸ್ಟ್ರೇಲಿಯಾ ತಂಡದ ಝಲಕ್ ಈಗಿನ ತಂಡಕ್ಕೆ ಇಲ್ಲ ಎಂದಿದ್ದಾರೆ.
ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಗೆ ಟಾಂಗ್ ಕೊಟ್ಟ ಹರ್ಭಜನ್ ಸಿಂಗ್, ‘ಬಾಯ್.. ಬಹುಶಃ ನೀವು ಮತ್ತೆ ಕ್ರಿಕೆಟ್ ಕಣಕ್ಕೆ ಮರಳಬೇಕು’ ಎಂದು ಕಾಲೆಳೆದಿದ್ದಾರೆ. ಈಗಿನ ತಂಡದಲ್ಲಿರುವ ಬ್ಯಾಟ್ಸ್ ಮನ್ ಗಳಿಗೆ ಗುಣಮಟ್ಟವೇ ಇಲ್ಲ. ತಂಡವೇ ಪೇಲವವಾಗಿದೆ ಎಂದು ಭಜಿ ಅಭಿಪ್ರಾಯಪಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ