Publish Date: Tue, 26 Sep 2017 (09:47 IST)
Updated Date: Tue, 26 Sep 2017 (09:49 IST)
ಬೆಂಗಳೂರು: ನಾಳೆ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾಲ್ಕನೇ ಏಕದಿನ ಪಂದ್ಯ ನಡೆಯಲಿದೆ. ಆದರೆ ಕಳೆದ ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ಮಳೆಯಾಗುತ್ತಿರುವುದರಿಂದ ಪಂದ್ಯ ನಡೆಯಬಹುದೇ ಎಂಬ ಅನುಮಾನ ಮೂಡಿಸಿದೆ.
ಕೆಲವು ದಿನ ವಿರಮಿಸಿದ್ದ ಮಳೆ ಮತ್ತೆ ಶುರುವಾಗಿದೆ. ಹಾಗಾಗಿ ನಾಳಿನ ಪಂದ್ಯಕ್ಕೆ ವರುಣ ಬಿಡುವು ಕೊಟ್ಟು ಪಂದ್ಯ ಪೂರ್ಣವಾಗಿ ನಡೆಯಲು ಅನುವು ಮಾಡಿಕೊಡಬಹುದೇ ಎಂಬುದೇ ಅನುಮಾನ.
ಈಗಾಗಲೇ ಟೀಂ ಇಂಡಿಯಾ ಸರಣಿ ಗೆದ್ದಿದೆಯಾದರೂ, ನಾಳಿನ ಪಂದ್ಯ ಮಳೆಯಿಂದ ರದ್ದಾದರೆ ಕ್ಲೀನ್ ಸ್ವೀಪ್ ಆಸೆಗೆ ತಣ್ಣೀರು ಸುರಿದಂತಾಗಲಿದೆ. ಹವಾಮಾನ ಇಲಾಖೆಯೂ ಮುಂದಿನ 24 ರಿಂದ 48 ಗಂಟೆವರೆಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ