Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿ ಕಳೆದ ಐದು ವರ್ಷಗಳಿಂದ ಕಾದಿದ್ದು ಯಾರಿಗಾಗಿ ಗೊತ್ತಾ?!

ವಿರಾಟ್ ಕೊಹ್ಲಿ ಕಳೆದ ಐದು ವರ್ಷಗಳಿಂದ ಕಾದಿದ್ದು ಯಾರಿಗಾಗಿ ಗೊತ್ತಾ?!
ಇಂಧೋರ್ , ಸೋಮವಾರ, 25 ಸೆಪ್ಟಂಬರ್ 2017 (07:32 IST)
ಇಂಧೋರ್: ಇಂಧೋರ್ ಪಂದ್ಯ ಮಗಿದ ಮೇಲೆ ಭಾರೀ ಸಂತಸದಲ್ಲಿದ್ದ ನಾಯಕ ವಿರಾಟ್ ಕೊಹ್ಲಿ ಕಳೆದ ಐದು ವರ್ಷಗಳಿಂದ ನಾವು ಇಂತಹ ಒಬ್ಬನಿಗಾಗಿಯೇ ಕಾದಿದ್ದೆವು ಎಂದಿದ್ದಾರೆ. ಆ ‘ಇಂತಹ’ ವ್ಯಕ್ತಿ ಯಾರು ಗೊತ್ತಾ?

 
ಟೀಂ ಇಂಡಿಯಾದಲ್ಲಿ ಸದ್ಯಕ್ಕೆ ಗೆಲುವಿನ ಕುದುರೆಯಾಗಿರುವ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಬಗ್ಗೆ ನಾಯಕ ಕೊಹ್ಲಿ  ಈ ರೀತಿ ಪಂದ್ಯ  ಮುಗಿದ ಮೇಲೆ ಹೊಗಳಿಕೆಯ ಸುರಿಮಳೆ ಸುರಿಸಿದ್ದಾರೆ.

ಮತ್ತೊಮ್ಮೆ ಪ್ರಥಮ ಏಕದಿನ ಪಂದ್ಯದ ಜಾದೂ ಮಾಡಿದ ಹಾರ್ದಿಕ್ ನಾಲ್ಕನೇ ಕ್ರಮಾಂಕದಲ್ಲಿ ಆಡಲಿಳಿದು ಭರ್ಜರಿಯಾಗಿ ಬ್ಯಾಟ್ ಬೀಸಿದರು. ಅವರ ಸಿಡಿಲಬ್ಬರದ ಬ್ಯಾಟಿಂಗ್ ನಿಂದಾಗಿ ಭಾರತಕ್ಕೆ 293 ರನ್ ಗಳ ಟಾರ್ಗೆಟ್ ಜುಜುಬಿಯಾಗಿ ಕಂಡಿತು.

ಯುವ ಆಲ್ ರೌಂಡರ್ ಈ ರೀತಿಯ ಕಮಾಲ್ ಮಾಡುತ್ತಿರುವುದು ಈ ಸರಣಿಯಲ್ಲಿ ಎರಡನೇ ಬಾರಿ. ಹೀಗಾಗಿ ನಾಯಕನ ವಿಶೇಷ ಹೊಗಳಿಕೆ ಪಾಂಡ್ಯಗೆ ಸಿಕ್ಕಿತ್ತು. ಪಂದ್ಯ ನಂತರ ಮಾತನಾಡಿದ ಕೊಹ್ಲಿ, ಇಂತಹ ಒಬ್ಬ ಪರಿಪೂರ್ಣ ಆಲ್ ರೌಂಡರ್ ಗಾಗಿ ತಂಡ ಐದು ವರ್ಷಗಳಿಂದ ಕಾದು ಕುಳಿತಿತ್ತು. ಕೊನೆಗೂ ನಾವು ಬಯಸಿದ ಆಲ್ ರೌಂಡರ್ ನಮಗೆ ಸಿಕ್ಕಿದ್ದಾನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನೀನೇ ಬೇಕು ಎಂದು ವಿರಾಟ್ ಕೊಹ್ಲಿ ಹಿಂದೆ ಬಿದ್ದ ಅವರು ಯಾರು?!