Publish Date: Sun, 24 Sep 2017 (07:39 IST)
Updated Date: Sun, 24 Sep 2017 (07:42 IST)
ಇಂಧೋರ್: ಭಾರತದ ವಿರುದ್ಧ ತೃತೀಯ ಏಕದಿನ ಪಂದ್ಯಕ್ಕೆ ಸಜ್ಜಾಗಿರುವ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಇದೀಗ ಭಾರತದ ಸ್ಪಿನ್ನರ್ ಗಳನ್ನು ಎದುರಿಸುವ ಬಗ್ಗೆ ತಲೆಕೆಡಿಸಿಕೊಂಡಿದೆ.
ಈ ಸಂದರ್ಭದಲ್ಲಿ ಮಾತನಾಡಿರುವ ಡೇವಿಡ್ ವಾರ್ನರ್, ನಮಗೆ ಉತ್ತಮ ಆರಂಭ ಬೇಕು. ಉತ್ತಮ ಆರಂಭ ದೊರಕಿದರೆ ಭಾರತೀಯ ಬೌಲರ್ ಗಳನ್ನು ಸುಲಭವಾಗಿ ಎದುರಿಸುವೆವು ಎಂದಿದ್ದಾರೆ.
ಮತ್ತೊಂದೆಡೆ ನಾಯಕನಾಗಿ ಯಶಸ್ವಿಯಾಗುತ್ತಿರುವ ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಿರುವ ವಾರ್ನರ್ ಇದಕ್ಕೆಲ್ಲಾ ಕಾರಣ ಧೋನಿ ಎಂದಿದ್ದಾರೆ. ಧೋನಿ ನಾಯಕರಾಗಿದ್ದಾಗ ನಾಯಕತ್ವದಲ್ಲಿ ಶಾಂತಿ, ಸಹನೆ ತಂದಿದ್ದರು. ಅದನ್ನೇ ಕೊಹ್ಲಿ ಮುಂದುವರಿಸಿದ್ದಾರೆ. ಈಗಲೂ ಕೊಹ್ಲಿಯನ್ನು ನಾಯಕನಾಗಿ ಮತ್ತಷ್ಟು ಬೆಳೆಸುವ ಕೆಲಸ ಧೋನಿ ಮಾಡುತ್ತಿದ್ದಾರೆ ಎಂದು ಆಸೀಸ್ ಬ್ಯಾಟಿಂಗ್ ದಾಂಡಿಗ ಹೇಳಿಕೊಂಡಿದ್ದಾರೆ.