Select Your Language

Notifications

webdunia
webdunia
webdunia
webdunia

ಕೆಣಕಲು ಬಂದ ಕುಲದೀಪ್ ಯಾದವ್ ಗೆ ಡೇವಿಡ್ ವಾರ್ನರ್ ತಿರುಗೇಟು

ಕೆಣಕಲು ಬಂದ ಕುಲದೀಪ್ ಯಾದವ್ ಗೆ ಡೇವಿಡ್ ವಾರ್ನರ್ ತಿರುಗೇಟು
ನವದೆಹಲಿ , ಶನಿವಾರ, 23 ಸೆಪ್ಟಂಬರ್ 2017 (07:24 IST)
ನವದೆಹಲಿ: ಕೋಲ್ಕೊತ್ತಾ ಏಕದಿನ ಪಂದ್ಯಕ್ಕೆ ಮೊದಲು ಡೇವಿಡ್ ವಾರ್ನರ್ ತನ್ನ ಬೌಲಿಂಗ್ ನಲ್ಲಿ ಬ್ಯಾಟ್ ಮಾಡಲು ಹೆದರುತ್ತಾರೆ ಎಂದಿದ್ದ ಟೀಂ ಇಂಡಿಯಾ ಯುವ ಸ್ಪಿನ್ನರ್ ಕುಲದೀಪ್ ಯಾದವ್ ಗೆ ತಿರುಗೇಟು ಸಿಕ್ಕಿದೆ.


ವಿಶ್ವದ ಸ್ಪೋಟಕ ಬ್ಯಾಟ್ಸ್ ಮನ್  ಗಳ ಪೈಕಿ ಒಬ್ಬರಾದ ತಮಗೇ ಸವಾಲು ಹಾಕಿದ ಯುವ ಬೌಲರ್ ನ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ವಾರ್ನರ್, ನನಗಿಂತ ಹೆಚ್ಚು ಒತ್ತಡ ಆತನ ಮೇಲಿದೆ ಎಂದಿದ್ದಾರೆ.

‘ಅವನ ಧೈರ್ಯಕ್ಕೆ ಮೆಚ್ಚಲೇಬೇಕು. ಕೋಲ್ಕೊತ್ತಾದಲ್ಲಿ ಆತ ಬೌಲಿಂಗ್ ಮಾಡಿದ ರೀತಿಯನ್ನು ಪ್ರಶಂಸಿಸಬೇಕು. ಆದರೆ ಒತ್ತಡ ನನ್ನ ಮೇಲಿಲ್ಲ. ಆತನ ಮೇಲಿದೆ’ ಡೇವಿಡ್ ವಾರ್ನರ್ ತಿರುಗೇಟು ನೀಡಿದ್ದಾರೆ.  ಮೊನ್ನೆಯಷ್ಟೇ ಕುಲದೀಪ್ ನಾನು ಯಾವ ಕ್ಷಣದಲ್ಲಿ ಬೇಕಾದರೂ ವಾರ್ನರ್ ವಿಕೆಟ್ ಉರುಳಿಸಬಲ್ಲೆ ಎಂದಿದ್ದರು.

ಇದನ್ನೂ ಓದಿ.. ಏಕದಿನದಲ್ಲೂ ನಂ.1 ಆಗಲು ಟೀಂ ಇಂಡಿಯಾಗೆ ಇನ್ನು ಕೆಲವೇ ಹೆಜ್ಜೆ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಏಕದಿನದಲ್ಲೂ ನಂ.1 ಆಗಲು ಟೀಂ ಇಂಡಿಯಾಗೆ ಇನ್ನು ಕೆಲವೇ ಹೆಜ್ಜೆ