Publish Date: Fri, 22 Sep 2017 (09:56 IST)
Updated Date: Fri, 22 Sep 2017 (09:58 IST)
ಕೋಲ್ಕೊತ್ತಾ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಾಮಾನ್ಯವಾಗಿ ಮೈದಾನದಲ್ಲಿ ಆಕ್ರಮಣಕಾರಿಯಾಗಿರುತ್ತಾರೆ. ಎದುರಾಳಿಗಳ ಏಟಿಗೆ ತಿರುಗೇಟು ಕೊಡುತ್ತಾರೆ. ಆದರೆ ನಿನ್ನೆಯ ಪಂದ್ಯದಲ್ಲಿ ಮಾತ್ರ ನಗುತ್ತಲೇ ಎದುರಾಳಿಗಳ ಸದ್ದಡಗಿಸಿದ ಘಟನೆ ನಡೆದಿದೆ.
ಆಸ್ಟ್ರೇಲಿಯಾ ಆಟಗಾರರು ಬ್ಯಾಟ್, ಬಾಲ್ ನಿಂದ ಆಟ ನಡೆಯದಿದ್ದರೆ, ಎದುರಾಳಿಗಳ ಮೇಲೆ ಸ್ಲೆಡ್ಜಿಂಗ್ ಅಸ್ತ್ರ ಪ್ರಯೋಗಿಸುತ್ತಾರೆ. ಅದರಲ್ಲೂ ಕೊಹ್ಲಿಯಂತಹ ಆಟಗಾರರು ಎದುರಾಳಿಗಳ ಸ್ಲೆಡ್ಜಿಂಗ್ ಗೆ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯಿಸುತ್ತಾರೆ. ಆದರೆ ನಿನ್ನೆ ಮಾತ್ರ ಕೊಹ್ಲಿ ಸೈಲಂಟಾಗಿಯೇ ಎದುರಾಳಿಯ ಗಪ್ ಚುಪ್ ಮಾಡಿದ್ದಾರೆ.
ಇದು ನಡೆದಿದ್ದು 33 ನೇ ಓವರ್ ನಲ್ಲಿ ಕೊಹ್ಲಿ ಬ್ಯಾಟಿಂಗ್ ಮಾಡುತ್ತಿದ್ದಾಗ. ಉತ್ತಮ ಲಹರಿಯಲ್ಲಿದ್ದ ಕೊಹ್ಲಿ, ವಿಕೆಟ್ ಕೀಪರ್ ಮ್ಯಾಥ್ಯೂ ವೇಡ್ ತಪ್ಪಿನಿಂದಾಗಿ ಒಂದು ಬೈ ರನ್ನಿಗೆ ಓಡಿದ್ದರು. ಇದರಿಂದ ಕೆರಳಿದ ವೇಡ್ ಕೊಹ್ಲಿಯನ್ನು ಕೆರಳಿಸುವ ಯತ್ನ ನಡೆಸಿದರು. ಆದರೆ ಕೊಹ್ಲಿ ಮಾತ್ರ ವೇಡ್ ಗೆ ನಗುತ್ತಲೇ ತಣ್ಣನೆಯ ಉತ್ತರ ಕೊಟ್ಟರು. ಕೊಹ್ಲಿಯಿಂದ ಜಗಳದ ನಿರೀಕ್ಷೆಯಲ್ಲಿದ್ದ ಆಸೀಸ್ ಆಟಗಾರರು ಈ ಬದಲಾವಣೆ ನೋಡಿ ಅವಾಕ್ಕಾದರು!
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ