Publish Date: Thu, 21 Sep 2017 (11:16 IST)
Updated Date: Thu, 21 Sep 2017 (11:19 IST)
ಕೋಲ್ಕೊತ್ತಾ: ಕಳೆದ ಬಾರಿ ಆಸ್ಟ್ರೇಲಿಯಾ ತಂಡ ಭಾರತ ಪ್ರವಾಸ ಕೈಗೊಂಡಾಗ ವಿರಾಟ್ ಕೊಹ್ಲಿ ಮತ್ತು ಸ್ಟೀವ್ ಸ್ಮಿತ್ ನಡುವೆ ಡಿಆರ್ ಎಸ್ ಬಳಕೆ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದವಾಗಿತ್ತು. ಇದರಿಂದಾಗಿ ಇವರಿಬ್ಬರು ದಿಗ್ಗಜ ನಾಯಕರ ಸಂಬಂಧ ಸಂಪೂರ್ಣ ಹಳಸಿತ್ತು.
ಆದರೆ ಏಕದಿನ ಸರಣಿ ಆಡಲು ಭಾರತಕ್ಕೆ ಬಂದಿಳಿದಿರುವ ಸ್ಟೀವ್ ಸ್ಮಿತ್ ಇದೀಗ ತಮಗೆ ಕೊಹ್ಲಿ ಮೇಲೆ ಯಾವುದೇ ವೈಷಮ್ಯವಿಲ್ಲ ಎಂದಿದ್ದಾರೆ. ಅಷ್ಟೇ ಅಲ್ಲದೆ, ಭಾರತ ತಂಡದ ಆಟಗಾರರು ಫಿಟ್ ಆಗಿರಲು ಕೊಹ್ಲಿಯೇ ಮಾದರಿಯಾಗಿ ನಿಂತಿದ್ದಾರೆ ಎಂದು ಟೀಂ ಇಂಡಿಯಾ ನಾಯಕನನ್ನು ಹೊಗಳಿದ್ದಾರೆ.
ಅಚ್ಚರಿಯೆಂದರೆ, ಆಸ್ಟ್ರೇಲಿಯಾ ಆಟಗಾರರು ಸದಾ ಕಿಡಿ ಕಾರುವ ಸ್ಪಿನ್ನರ್ ಹರ್ಭಜನ್ ಸಿಂಗ್ ಮತ್ತು ಸಚಿನ್ ತೆಂಡುಲ್ಕರ್ ತಮ್ಮ ಮೆಚ್ಚಿನ ಭಾರತೀಯ ಆಟಗಾರರು ಎಂದು ಹೇಳಿ ಸ್ಮಿತ್ ಅಚ್ಚರಿ ಮೂಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ