Select Your Language

Notifications

webdunia
webdunia
webdunia
webdunia

ಹೊಸ ಸುದ್ದಿ ಕೊಡಲಿದ್ದಾರಾ ವಿರಾಟ್ ಕೊಹ್ಲಿ-ಅನುಷ್ಕಾ?

ಹೊಸ ಸುದ್ದಿ ಕೊಡಲಿದ್ದಾರಾ ವಿರಾಟ್ ಕೊಹ್ಲಿ-ಅನುಷ್ಕಾ?
ಮುಂಬೈ , ಗುರುವಾರ, 21 ಸೆಪ್ಟಂಬರ್ 2017 (08:45 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಮೋಸ್ಟ್ ವಾಂಟೆಡ್ ಕಪಲ್. ಇಬ್ಬರೂ ಎಲ್ಲಿ ಹೋದರೂ ಜತೆಯಾಗಿ ಹೋಗುವುದು ಈಗ ಗುಟ್ಟಾಗಿಯೇನೂ ಉಳಿದಿಲ್ಲ. ಇವರಿಬ್ಬರು ಈಗ ಹೊಸ ಸುದ್ದಿ ಕೊಡುತ್ತಿದ್ದಾರೆ.


ಅದು ಮದುವೆ ವಿಷಯವಂತೂ ಅಲ್ಲ. ಮದುವೆ ಬಗ್ಗೆ ಯಾಕೋ ಈ ಜೋಡಿ ತುಟಿ ಪಿಟಕ್ ಎನ್ನುತ್ತಿಲ್ಲ.  ಅದರ ಬದಲಾಗಿ ಕೊಹ್ಲಿ ಮತ್ತು ಅನುಷ್ಕಾ ಜತೆಯಾಗಿ ರೆಸ್ಟೋರೆಂಟ್ ಒಂದನ್ನು ತೆರೆಯಲಿದ್ದಾರಂತೆ ಎಂಬ ಸುದ್ದಿ ಬಂದಿದೆ.

ಇದೇ ಕಾರಣಕ್ಕೆ ಇಬ್ಬರೂ ದೆಹಲಿ ಮತ್ತು ಮುಂಬೈಯಲ್ಲಿ ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡಿದ್ದಾರೆಂಬ ಮಾಹಿತಿ ಕೇಳಿ ಬಂದಿದೆ. ಈ ಮೂಲಕ ಇಬ್ಬರೂ ಮದುವೆಗಿಂತ ಮೊದಲು ಲೈಫ್ ಸೆಟಲ್ ಮಾಡಿಕೊಳ್ಳುವ ಯೋಜನೆ ಹಾಕಿಕೊಂಡಿದ್ದಾರೆಂಬ ಗುಸು ಗುಸು ಕೇಳಿ ಬಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪದ್ಮಭೂಷಣ ಪ್ರಶಸ್ತಿಗೆ ಧೋನಿ ಹೆಸರು ಶಿಫಾರಸು: ಬಿಸಿಸಿಐ