Publish Date: Fri, 22 Sep 2017 (08:49 IST)
Updated Date: Fri, 22 Sep 2017 (08:54 IST)
ಕೋಲ್ಕೊತ್ತಾ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಎಲ್ಲಕ್ಕಿಂತ ಹೆಚ್ಚು ಆಟಗಾರರ ಕಂಗೆಡಿಸಿದ್ದು ಬಿಸಿಲು. ಉಭಯ ತಂಡದ ಆಟಗಾರರು ಮೈದಾನದಲ್ಲಿ ಬೆವರಿಳಿಸಿ ಸುಸ್ತಾಗಿ ಹೋಗಿದ್ದರು.
ಆಟಗಾರರು ಆಗಾಗ ನೀರು ಕುಡಿದು, ಐಸ್ ಪ್ಯಾಕ್ ಮೈಮೇಲೆ ಹಾಕಿಕೊಂಡು, ಮುಖಕ್ಕೆ ಬಾಟಲಿ ನೀರು ಸುರುವಿಕೊಂಡು ಹೇಗೋ ಬಿಸಿಲಿನ ಝಳದಿಂದ ರಕ್ಷಿಸಿಕೊಳ್ಳಲು ಯತ್ನಿಸುತ್ತಿದ್ದುದು ಕಂಡುಬಂತು.
ಭಾರತೀಯ ಆಟಗಾರರೂ ಇದಕ್ಕೆ ಹೊರತಾಗಿರಲಿಲ್ಲ. ಫಿಟ್ ಆಂಡ್ ಫೈನ್ ವಿರಾಟ್ ಕೊಹ್ಲಿ ಕೂಡಾ ಐಸ್ ಪ್ಯಾಕ್ ಹಾಕಿಕೊಂಡು ಆಡುತ್ತಿದ್ದರೂ, ಬೆವರು ಹರಿಸಿ ಸುಸ್ತಾದವರಂತೆ ಕಂಡುಬರುತ್ತಿದ್ದರು. ರನ್ ಗಳಿಸಲು ಪಿಚ್ ನಡುವೆ ಓಡುವಷ್ಟರಲ್ಲಿ ಆಟಗಾರರು ತೀರಾ ಬಳಲುತ್ತಿದ್ದರು. ಆಗಾಗ ಫಿಸಿಷಿಯನ್ ಬಂದು ಆಟಗಾರರ ಫಿಟ್ನೆಸ್ ಕಾಯ್ದುಕೊಳ್ಳಬೇಕಾಗಿ ಬರುತ್ತಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ