Publish Date: Fri, 22 Sep 2017 (09:00 IST)
Updated Date: Fri, 22 Sep 2017 (09:04 IST)
ಕೋಲ್ಕೊತ್ತಾ: ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ದ್ವಿತೀಯ ಏಕದಿನ ಹಲವು ನಾಟಕಗಳಿಗೆ ಸಾಕ್ಷಿಯಾಯಿತು. ಆಸೀಸ್ ನಾಯಕ ಸ್ಟೀವ್ ಸ್ಮಿತ್ ಕ್ಯಾಚ್ ಹಿಡಿದರೂ ನಂತರ ವಿಕೆಟ್ ಗೆ ಬಾಲ್ ತಾಗಿಸಿ ರನೌಟ್ ಮಾಡಿದರೂ ಹಾರ್ದಿಕ್ ಪಾಂಡ್ಯ ನಾಟೌಟ್ ಆಗಿದ್ದರು!
ಅದಕ್ಕೆ ಕಾರಣ ನೋ ಬಾಲ್! ಸ್ಮಿತ್ ಹಿಡಿದ ಬಾಲ್ ನೋ ಬಾಲ್ ಆಗಿತ್ತು. ಆದರೆ ಕ್ಯಾಚ್ ಹಿಡಿದ ತಕ್ಷಣವೇ ನೋ ಬಾಲ್ ಎಂದು ತಿಳಿದ ಸ್ಮಿತ್ ಬಾಲ್ ನ್ನು ವಿಕೆಟ್ ಗೆ ತಾಗಿಸಿ ರನೌಟ್ ಮಾಡಿದರು. ಹಾಗಿದ್ದರೂ ಅಂಪಾಯರ್ ಔಟ್ ನೀಡಲು ಒಪ್ಪಲಿಲ್ಲ.
ಇದಕ್ಕಾಗಿ ಆಸೀಸ್ ಆಟಗಾರರು ಅಂಪಾಯರ್ ಗಳ ಜತೆ ವಾಗ್ವಾದ ನಡೆಸಿದರು. ಆದರೆ ಒಮ್ಮೆ ಕ್ಯಾಚ್ ಹಿಡಿದ ಮೇಲೆ ಬಾಲ್ ಡೆಡ್ ಬಾಲ್ ಆಗುತ್ತದೆ. ಹಾಗಾಗಿ ನಂತರ ಬಾಲ್ ವಿಕೆಟ್ ಗೆ ತಾಗಿಸಿದರೂ ರನೌಟ್ ಪರಿಗಣನೆಗೆ ಬರುವುದಿಲ್ಲ. ಇದೇ ಆಧಾರದಲ್ಲಿ ಪಾಂಡ್ಯಗೆ ನಾಟೌಟ್ ಎಂದ ಅಂಪಾಯರ್ ಗಳು ಒಂದು ಫ್ರೀ ಹಿಟ್ ನೀಡಿದ್ದರು. ಆದರೆ ಅಷ್ಟರಲ್ಲಿ ಮಳೆ ಸುರಿದಿದ್ದರಿಂದ ಆಟಗಾರರು ಪೆವಿಲಿಯನ್ ಸೇರಿಕೊಳ್ಳಬೇಕಾಯಿತು.