ಇಂಧೋರ್: ಆಸ್ಟ್ರೇಲಿಯಾ ವಿರುದ್ಧ ಮೂರನೇ ಪಂದ್ಯವನ್ನೂ 5 ವಿಕೆಟ್ ಗಳಿಂದ ಭರ್ಜರಿಯಾಗಿ ಗೆದ್ದ ಟೀಂ ಇಂಡಿಯಾ ಮತ್ತೊಂದು ಸರಣಿ ಗೆಲುವು ತನ್ನದಾಗಿಸಿದೆ. ಇದರೊಂದಿಗೆ ಹಲವು ದಾಖಲೆಗಳನ್ನು ತನ್ನ ಬುಟ್ಟಿಗೆ ಸೇರಿಸಿಕೊಂಡಿದೆ. ಇದೀಗ ಐಸಿಸಿ ಏಕದಿನ ರ್ಯಾಂಕಿಂಗ್ ಪಟ್ಟಿಯಲ್ಲಿ ನಂ.1 ಆಗಿದೆ.
ಕೊಹ್ಲಿ ನಾಯಕತ್ವದಲ್ಲಿ ಇದು ಸತತ 9 ನೇ ಏಕದಿನ ಗೆಲುವಾಗಿತ್ತು. ಇದುವರೆಗೆ ಧೋನಿ ಮಾತ್ರ ಮಾಡಿದ್ದ ಸಾಧನೆಯನ್ನು ಕೊಹ್ಲಿ ಮುರಿದರು. ಅದಲ್ಲದೆ ಸತತ ಸರಣಿ ಗೆಲುವಿನ ದಾಖಲೆಯಲ್ಲೂ ದ್ರಾವಿಡ್, ಧೋನಿಗೆ ಸರಿಸಮವಾಗಿ ಕೊಹ್ಲಿ ನಿಂತರು. ಭಾರತ ಇದೀಗ ಸತತವಾಗಿ ಆರು ಏಕದಿನ ಸರಣಿ ಗೆಲುವು ದಾಖಲಿಸಿದೆ.
ಮತ್ತೊಂದು ಸರಣಿ ಗೆಲುವು ದಾಖಲಿಸಿದ ಟೀಂ ಇಂಡಿಯಾ ಈಗ ಏಕದಿನ ನಂ.1 ತಂಡವಾಗಿದ್ದ ದ. ಆಫ್ರಿಕಾವನ್ನು (119 ಪಾಯಿಂಟ್) ಹಿಂದಕ್ಕೆ ತಳ್ಳಿ ನಂ.1 (120 ಅಂಕ) ತಂಡವಾಗಿ ಮೆರೆದಿದೆ. ಟೆಸ್ಟ್ ಕ್ರಿಕೆಟ್ ನಲ್ಲೂ ಭಾರತವೇ ನಂ.1. ಎರಡೂ ಮಾದರಿಯ ಕ್ರಿಕೆಟ್ ನಲ್ಲಿ ಭಾರತ ನಂ.1 ಆಗಿ ಮೆರೆಯುತ್ತಿರುವುದು ಇದೇ ಮೊದಲು ಎನ್ನುವುದು ವಿಶೇಷ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ