Select Your Language

Notifications

webdunia
webdunia
webdunia
webdunia

ಇಂಧೋರ್`ನಲ್ಲಿ 3ನೇ ಏಕದಿನ ಪಂದ್ಯ: ಸರಣಿ ಜೊತೆಗೆ ಧೋನಿ, ಪಾಂಟಿಂಗ್, ಹಾಮ್ಲಾ ದಾಖಲೆಗಳ ಮೇಲೆ ಕೊಹ್ಲಿ ಕಣ್ಣು

ಇಂಧೋರ್`ನಲ್ಲಿ 3ನೇ ಏಕದಿನ ಪಂದ್ಯ: ಸರಣಿ ಜೊತೆಗೆ ಧೋನಿ, ಪಾಂಟಿಂಗ್, ಹಾಮ್ಲಾ ದಾಖಲೆಗಳ ಮೇಲೆ ಕೊಹ್ಲಿ ಕಣ್ಣು
ಇಂಧೋರ್ , ಭಾನುವಾರ, 24 ಸೆಪ್ಟಂಬರ್ 2017 (12:11 IST)
ಆಸ್ಟ್ರೇಲಿಯಾ ವಿರುದ್ಧದ ಎರಡು ಏಕದಿನ ಪಂದ್ಯಗಳನ್ನ ಗೆದ್ದು ಐಸಿಸಿ ಶ್ರೇಯಾಂಕದಲ್ಲಿ ಮೇಲೇರಿರುವ ಟೀಮ್ ಇಂಡಿಯಾ ಇವತ್ತು 3ನೇ ಏಕದಿನ ಪಂದ್ಯವನ್ನಾಡುತ್ತಿದೆ. ಈ ಪಂದ್ಯವನ್ನೂ ಗೆದ್ದು ಸರಣಿ ಕೈವಶ ಮಾಡಿಕೊಳ್ಳಲು ಕೊಹ್ಲಿ ಪಡೆ ಹವಣಿಸುತ್ತಿದ್ದರೆ ಆಸೀಸ್ ಆಟಗಾರರಿಗೆ ಇದು ಡು ಆರ್ ಡೈ ಪಂದ್ಯವಾಗಿದೆ.

ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ಪ್ರಬಲವಾಗಿರುವ ಟೀಮ್ ಇಂಡಿಯಾ ಗೆಲ್ಲುವ ಫೇವರಿಟ್ ತಂಡವಾಗಿದ್ದರೆ, ಬ್ಯಾಟಿಂಗ್, ಫೀಲ್ಡಿಂಗ್ ತಪ್ಪುಗಳನ್ನ ತದ್ದಿಕೊಂಡು ಆಸಿಸ್ ಕಣಕ್ಕಿಳಿಯಬೇಕಿದೆ. ಇಂಧೋರ್`ನಲ್ಲಿ ನಡೆಯಲಿರುವ ಈ ಪಂದ್ಯ ಹಲವು ಹೊಸ ದಾಖಲೆಗಳಿಗೆ ಸಾಕ್ಷಿಯಾಗುವ ಸಾಧ್ಯತೆ ಇದೆ.

ಧೋನಿ ದಾಖಲೆ ಸರಿಗಟ್ಟುತ್ತಾರಾ ಕೊಹ್ಲಿ..?:
ಧೋನಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ನವೆಂಬರ್ 2008ರಿಮದ ಫೆಬ್ರವರಿ 2099ರವರೆಗೆ ಸತತವಾಗಿ 9 ಏಕದಿನ ಪಂದ್ಯಗಳನ್ನ ಗೆದ್ದ ದಾಖಲೆ ಹೊಂದಿದೆ. ಇದೀಗ, ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ ಸಸತ 8 ೇಕದಿನ ಪಂದ್ಯ ಗೆದ್ದಿದೆ. ಈ ಪಂದ್ಯವನ್ನೂ ಗೆದ್ದರೆ ಧೋನಿ ದಾಖಲೆಯನ್ನ ವಿರಾಟ್ ಕೊಹ್ಲಿ ಸರಿಗಟ್ಟಲಿದ್ದಾರೆ.

ಡಿವಿಲಿಯರ್ಸ್ ದಾಖಲೆ ಮುರಿಯುತ್ತಾರಾ ಕೊಹ್ಲಿ..? 
ನಾಯಕನಾಗಿ ವಿರಾಟ್ ಕೊಹ್ಲಿ 2000 ರನ್ ಪೂರೈಸಲು 41 ರನ್`ಗಳ ಅಗತ್ಯವಿದೆ. 34 ಇನ್ನಿಂಗ್ಸ್`ಗಳಲ್ಲಿ 1959 ರನ್ ಗಳಿಸಿರುವ ವಿರಾಟ್, ನಾಯಕನಾಗಿ ವೇಗದ 2000 ರನ್ ಗಳಿಸಿದ ಎಬಿಡಿವಿಲಿಯರ್ಸ್ ದಾಖಲೆ ಮುರಯುವ ಸಾಧ್ಯತೆ ಇದೆ.

ಪಾಂಟಿಂಗ್, ಹಾಮ್ಲಾ ದಾಖಲೆಗಳ ಮೇಲೂ ಕಣ್ಣು 
ರಿಕಿ ಪಾಂಟಿಂಗ್ ಅವರ 30 ಶತಕಗಳ ದಾಖಲೆ ಸರಿಗಟ್ಟಲು ವಿರಾಟ್ ಕೊಹ್ಲಿ 1 ಶತಕದ ಅಗತ್ಯವಿದೆ. ಕೋಲ್ಕತ್ತಾ ಪಂದ್ಯದಲ್ಲಿ ವರ್ಸ್ ನೈಮಟಿಗೆ ಔಟಾಗಿದ್ದ ಕೊಹ್ಲಿ ಇಲ್ಲಿ ಶತಕದ ದಾಖಲೆಯ ನಿರೀಕ್ಷೆ ಇದೆ. ತವರಲ್ಲಿ 13 ಶತಕಗಳನ್ನ ಸಿಡಿಸಿರುವ ವಿರಾಟ್ ಕೊಹ್ಲಿ ಹಶೀಮ್ ಹಮ್ಲಾ ಜೊತೆ ಅಗ್ರ ಸ್ಥಾನ ಹಂಚಿಕೊಂಡಿದ್ದು, ಇಲ್ಲಿ ಸೆಂಚರಿ ಸಿಡಿದರೆ ಆ ದಾಖಲೆಯೂ ಕೊಹ್ಲಿ ಹೆರಸಿಗೆ ಬರಲಿದೆ.

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

‘ವಿರಾಟ್ ಕೊಹ್ಲಿ ಯಶಸ್ಸಿಗೆ ಧೋನಿಯೇ ಕಾರಣ’