Publish Date: Mon, 25 Sep 2017 (07:27 IST)
Updated Date: Mon, 25 Sep 2017 (07:29 IST)
ಕರಾಚಿ: ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳಿಗೆ ಟೀಂ ಇಂಡಿಯಾ ನಾಯಕನ ಮೇಲಿನ ಕ್ರೇಜ್ ದಿನೇ ದಿನೇ ಹೆಚ್ಚುತ್ತಿದೆ. ಇದೀಗ ತಮ್ಮದೇ ದೇಶದ ಕ್ರಿಕೆಟಿಗರನ್ನು ಪಕ್ಕಕ್ಕೆ ಸರಿಸಿ ಕೊಹ್ಲಿಯೇ ಬೇಕೆಂದಿದ್ದಾರೆ.
ಟ್ವಿಟರ್ ಖಾತೆ ಹೊಂದಿರುವ ಪಾಕ್ ಕ್ರಿಕೆಟ್ ಅಭಿಮಾನಿಯೊಬ್ಬರು ತಮ್ಮ ಖಾತೆಯಲ್ಲಿ ನಿಮಗೆ ಭಾರತದ ಕೊಹ್ಲಿ ಬೇಕೇ? ನಮ್ಮದೇ ದೇಶದ ಆರಂಭಿಕ ಅಹಮ್ಮದ್ ಶೆಹಜಾದ್ ಬೇಕೇ ಎಂದು ಪ್ರಶ್ನಿಸಲಾಗಿತ್ತು.
ಈ ಸಂದರ್ಭದಲ್ಲಿ ಅಭಿಮಾನಿಗಳು ಒಕ್ಕೊರಲಿನಿಂದ ತಮಗೆ ಶೆಹಜಾದ್ ಬೇಕಾಗಿಲ್ಲ. ಕೊಹ್ಲಿಯೇ ಬೇಕು ಎಂದು ಉತ್ತರಿಸಿದ್ದಾರೆ. ಇದು ಭಾರತೀಯ ಆಟಗಾರನ ಮೇಲೆ ಪಾಕ್ ಅಭಿಮಾನಿಗಳಿಗಿರುವ ಕ್ರೇಜ್!
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ