Publish Date: Mon, 25 Sep 2017 (07:23 IST)
Updated Date: Mon, 25 Sep 2017 (07:25 IST)
ಇಂಧೋರ್: ರಾಷ್ಟ್ರಪಿತ ಗಾಂಧಿ ಜಯಂತಿಗೆ ಕೇವಲ ಒಂದು ವಾರ ಬಾಕಿಯಿರುವಾಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಸ್ವಚ್ಛ್ ಭಾರತ ಅಭಿಯಾನವನ್ನು ಸೂಕ್ತ ವೇದಿಕೆಯಲ್ಲೇ ಪ್ರಚಾರ ಮಾಡಿದೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಇಂಧೋರ್ ನಲ್ಲಿ ನಡೆದ ತೃತೀಯ ಏಕದಿನ ಪಂದ್ಯದ ವೇಳೆ ಬಿಸಿಸಿಐ ಮೈದಾನದ ಬೃಹತ್ ಪರದೆಯ ಮೇಲೆ ಸ್ವಚ್ಛತಾ ಹೀ ಸೇವಾ ಜಾಹೀರಾತು ಪ್ರಕಟಿಸಿದೆ.
ಪಂದ್ಯದ 18 ನೇ ಓವರ್ ನಲ್ಲಿ ಬೃಹತ್ ಪರದೆಯ ಮೇಲೆ ಈ ಜಾಹೀರಾತು ಪ್ರಕಟಿಸುವ ಮೂಲಕ ಸ್ವಚ್ಛತೆ ಕಾಪಾಡುವ ಅಭಿಯಾನಕ್ಕೆ ಬಿಸಿಸಿಐ ಕೈ ಜೋಡಿಸಿದೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಸ್ವಚ್ಛತಾ ಹೀ ಸೇವಾ ಎಂಬ ಅಭಿಯಾನ ಆರಂಭಿಸಿದ್ದರು. ಅದಕ್ಕೆ ಬಿಸಿಸಿಐ ಈ ರೀತಿಯಾಗಿ ತನ್ನ ಕೈ ಜೋಡಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ