Publish Date: Tue, 26 Sep 2017 (09:03 IST)
Updated Date: Tue, 26 Sep 2017 (09:09 IST)
ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯನ್ನು ಗೆದ್ದು, ಇದೀಗ ಕ್ಲೀನ್ ಸ್ವೀಪ್ ಕಡೆಗೆ ಸಾಗಿರುವ ಟೀಂ ಇಂಡಿಯಾಗೆ ಕ್ರಿಕೆಟ್ ಮಾಂತ್ರಿಕ ಸಚಿನ್ ತೆಂಡುಲ್ಕರ್ ಹೊಸಾ ಐಡಿಯಾ ಕೊಟ್ಟಿದ್ದಾರೆ.
ಮೂರನೇ ಏಕದಿನ ಪಂದ್ಯ ಗೆದ್ದ ಖುಷಿಗೆ ಟ್ವೀಟ್ ಮಾಡಿರುವ ಸಚಿನ್, ‘ಚೆನ್ನಾಗಿ ಆಡಿದಿರಿ ಹುಡುಗರೆ. 9 ಪಂದ್ಯಗಳಿಂದ ಅಜೇಯರಾಗಿದ್ದೀರಿ. ಮುಂದಿನದು 11 ಅಜೇಯ ಪಂದ್ಯಗಳ ಗುರಿ ನಿಮ್ಮದಾಗಲಿದೆ. ಬ್ಲೂ ವಾಶ್ ಮಾಡಿ’ ಎಂದು ಸಚಿನ್ ಟ್ವೀಟ್ ಮಾಡಿದ್ದಾರೆ.
ಸಾಮಾನ್ಯವಾಗಿ ಸರಣಿಯಲ್ಲಿ ಎಲ್ಲಾ ಪಂದ್ಯಗಳನ್ನು ಗೆಲ್ಲುವುದಕ್ಕೆ ವೈಟ್ ವಾಶ್ ಮಾಡುವುದು ಎಂಬ ಪದ ಬಳಕೆ ಮಾಡುತ್ತೇವೆ. ಆದರೆ ನೀಲಿ ಸಮವಸ್ತ್ರ ಧರಿಸುವ ಭಾರತೀಯ ಆಟಗಾರರಿಗೆ ಸಚಿನ್ ಬ್ಲೂ ವಾಶ್ ಎಂಬ ಪದ ಪ್ರಯೋಗ ಬಳಕೆ ಮಾಡಿರುವುದು ವಿಶೇಷವಾಗಿದೆ. ಸೆಪ್ಟೆಂಬರ್ 28 ರಂದು ಬೆಂಗಳೂರಿನಲ್ಲಿ ಮುಂದಿನ ಪಂದ್ಯ ನಡೆಯಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ