Select Your Language

Notifications

webdunia
webdunia
webdunia
webdunia

ಕತೆ ಇಷ್ಟಕ್ಕೇ ಮುಗಿದಿಲ್ಲ! ಆಸೀಸ್ ಗೆ ವಿರಾಟ್ ಕೊಹ್ಲಿ ಎಚ್ಚರಿಕೆ ಕೊಟ್ಟಿದ್ದೇಕೆ?!

ಕತೆ ಇಷ್ಟಕ್ಕೇ ಮುಗಿದಿಲ್ಲ! ಆಸೀಸ್ ಗೆ ವಿರಾಟ್ ಕೊಹ್ಲಿ ಎಚ್ಚರಿಕೆ ಕೊಟ್ಟಿದ್ದೇಕೆ?!
ನವದೆಹಲಿ , ಮಂಗಳವಾರ, 26 ಸೆಪ್ಟಂಬರ್ 2017 (07:27 IST)
ನವದೆಹಲಿ: ನಾವು ಐದು ಪಂದ್ಯಗಳ ಸರಣಿಯಲ್ಲಿ ಮೂರು ಪಂದ್ಯ ಗೆದ್ದು ಸರಣಿ ಗೆಲುವು ಪಡೆದಿರಬಹುದು. ಇಷ್ಟಕ್ಕೇ ಕತೆ ಮುಗಿದಿಲ್ಲ ಎಂದು ವಿರಾಟ್ ಕೊಹ್ಲಿ ಎದುರಾಳಿ ನಾಯಕನಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

 
ಅಷ್ಟಕ್ಕೂ ಕೊಹ್ಲಿ ಯಾಕೆ ಹೀಗೊಂದು ಸಂದೇಶ ರವಾನಿಸಿದರು ಗೊತ್ತಾ? ಮತ್ತೆ ಸ್ಟೀವ್ ಸ್ಮಿತ್ ಜತೆ ಜಗಳ ಕಾಯುವ ಪ್ಲ್ಯಾನ್ ಏನಾದ್ರೂ ಇದ್ಯಾ ಎಂದು ಅನುಮಾನಿಸಬೇಡಿ.

ಅಸಲಿಗೆ ಕೊಹ್ಲಿ ಹೀಗೆ ಹೇಳಿದ್ದು, ಮುಂದಿನ ಪಂದ್ಯವನ್ನೂ ಮೊದಲಿನಷ್ಟೇ ಮಹತ್ವ ತೆಗೆದುಕೊಂಡು ಆಡುತ್ತೇವೆ ಎಂದು. ನಮ್ಮ ಎಲ್ಲಾ 15 ಆಟಗಾರರಿಗೂ ಒಂದೇ ಸಂದೇಶ ನೀಡಲಾಗಿದೆ. ಯಾರನ್ನೇ ಆಯ್ಕೆ ಮಾಡಿದರೂ ಮೈದಾನಕ್ಕಿಳಿದ ತಕ್ಷಣ ಎದುರಾಳಿಗಳ ಮೇಲೆ ಕರುಣೆಯಿಲ್ಲದೇ ಮುನ್ನುಗ್ಗು ಎಂದು ಸೂಚನೆ ಕೊಡಲಾಗಿದೆ. ಹಾಗಾಗಿ ಮುಂದಿನ ಪಂದ್ಯವನ್ನೂ ಹಗುರವಾಗಿ ಕಾಣುವಂತೇ ಇಲ್ಲ ಎಂದು ಕೊಹ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪದ್ಮಭೂಷಣ ಪ್ರಶಸ್ತಿಗೆ ಪಿ.ವಿ. ಸಿಂಧು ಹೆಸರು ಶಿಫಾರಸು