Select Your Language

Notifications

webdunia
webdunia
webdunia
webdunia

ಪದ್ಮಭೂಷಣ ಪ್ರಶಸ್ತಿಗೆ ಪಿ.ವಿ. ಸಿಂಧು ಹೆಸರು ಶಿಫಾರಸು

ಪದ್ಮಭೂಷಣ ಪ್ರಶಸ್ತಿಗೆ ಪಿ.ವಿ. ಸಿಂಧು ಹೆಸರು ಶಿಫಾರಸು
ನವದೆಹಲಿ , ಸೋಮವಾರ, 25 ಸೆಪ್ಟಂಬರ್ 2017 (15:02 IST)
ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಅವರ ಹೆಸರನ್ನ ಪ್ರತಿಷ್ಠಿತ ಪದ್ಮ ಭೂಷಣ ಪ್ರಶಸ್ತಿಗೆ ಕೇಂದ್ರ ಕ್ರೀಡಾ ಇಲಾಖೆ ಶಿಫಾರಸು ಮಾಡಿದೆ.

ವಿಶ್ವದ ನ0 2. ಶ್ರೇಯಾಂಕ ಹೊಂದಿರುವ ಪಿ.ವಿ. ಸಿಂಧು, ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಬಳಿಕ ಈ ವರ್ಷ ಪದ್ಮಭೂಷಣ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡ 2ನೇ ಕ್ರೀಡಾಪಟುವಾಗಿದ್ದಾರೆ.

ಕಳೆದ ತಿಂಗಳು ವರ್ಲ್ಡ್ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್`ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಪಿ.ವಿ. ಸಿಂಧು, ಇತ್ತೀಚೆಗೆ ಜಪಾನಿನ ನೊಜೋಮಿ ಒಕುಹರ ಅವರನ್ನ  22-20, 11-21, 21-18 ಅಂತರದಿಂದ ಮಣಿಸಿ ಕೊರಿಯಾ ಓಪನ್ ಸೂಪರ್ ಸೀರೀಸ್ ಗೆದ್ದಿದ್ದರು. ಕೊರಿಯಾ ಓಪನ್ ಸೀರಿಸ್ ಗೆದ್ದ ಮೊದಲ ಬ್ಯಾಡ್ಮಿಂಟನ್ ಪಟು ಪಿ.ವಿ. ಸಿಂಧು. ಈ ಅದ್ಬುತ ಯಶಸ್ಸಿನ ಬಳಿಕ ಕಳೆದ ವಾರವಷ್ಟೇ ಪಿ.ವಿ. ಸಿಂಧು ವಿಶ್ವ ಬ್ಯಾಡ್ಮಿಂಟನ್ ಸಿಂಗಲ್ಸ್ ಶ್ರೇಯಾಂಕದಲ್ಲಿ 2ನೇ ಸ್ಥಾನಕ್ಕೇರಿದ್ದರು.

22 ವರ್ಷದ ಪಿ.ವಿ. ಸಿಂಧುಗೆ ಮಾರ್ಚ್ 2015ರಂದು ದೇಶದ 4ನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮ ಶ್ರೀ ನೀಡಿ ಗೌರವಿಸಲಾಗಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಡ್ರೆಸ್ಸಿಂಗ್ ರೂಂ ಸೀಕ್ರೆಟ್ ಬಿಚ್ಚಿಟ್ಟ ವಿರಾಟ್ ಕೊಹ್ಲಿ