Publish Date: Wed, 27 Sep 2017 (07:26 IST)
Updated Date: Wed, 27 Sep 2017 (07:28 IST)
ನವದೆಹಲಿ: ಟೀಂ ಇಂಡಿಯಾದಲ್ಲಿ ಸದ್ಯಕ್ಕೆ ಹೊಸ ಅಲೆ ಸೃಷ್ಟಿಸಿದ ಆಟಗಾರ ಹಾರ್ದಿಕ್ ಪಾಂಡ್ಯ. ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಈ ಕ್ರಿಕೆಟಿಗನಿಗೆ ಮಾಜಿ ನಾಯಕ, ಸದ್ಯಕ್ಕೆ ಎ ತಂಡದ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಹೊಗಳಿದ್ದಾರೆ.
ಒಂದು ಕಾಲದಲ್ಲಿ ಇದೇ ದ್ರಾವಿಡ್ ಗರಡಿಯಲ್ಲಿ ಪಳಗಿದ ಹಾರ್ದಿಕ್ ಟೀಂ ಇಂಡಿಯಾಗೆ ಕಾಲಿಟ್ಟ ಆರಂಭದ ದಿನಗಳಲ್ಲೇ ತಮ್ಮ ಯಶಸ್ಸಿಗೆ ದ್ರಾವಿಡ್ ತರಬೇತಿ ಕಾರಣ ಎಂದಿದ್ದರು. ಇದೀಗ ಶಿಷ್ಯನಿಗೆ ಸ್ವತಃ ದ್ರಾವಿಡ್ ಶಹಬಾಶ್ ಗಿರಿ ಕೊಟ್ಟಿದ್ದಾರೆ.
ಪಾಂಡ್ಯ ಈಗ ಪರಿಪೂರ್ಣ ಆಟಗಾರನಾಗಿ ಬೆಳೆದಿದ್ದಾರೆ ಎಂದು ದ್ರಾವಿಡ್ ಪ್ರಶಂಸಿಸಿದ್ದಾರೆ. ನಾನು ಗಮನಿಸಿದ ಹಾಗೆ ಪಾಂಡ್ಯರಲ್ಲಿ ಕಂಡುಬಂದಿರುವ ಗಮನಾರ್ಹ ಬದಲಾವಣೆಯೆಂದರೆ, ಆತ ಈಗ ಪರಿಸ್ಥಿತಿಗೆ ತಕ್ಕ ಹಾಗೆ ಆಡಲು ಕಲಿತಿದ್ದಾನೆ. ತನಗಿಷ್ಟ ಬಂದ ಹಾಗೆ ಆಡುವುದಿಲ್ಲ. ಇದು ಆತನನ್ನು ಪರಿಪೂರ್ಣನಾಗಿಸಿದೆ ಎಂದು ದ್ರಾವಿಡ್ ಸಂದರ್ಶನವೊಂದರಲ್ಲಿ ತಮ್ಮ ಹಳೆಯ ಶಿಷ್ಯನನ್ನು ಹೊಗಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ