Publish Date: Sat, 30 Sep 2017 (07:39 IST)
Updated Date: Sat, 30 Sep 2017 (07:41 IST)
ಬೆಂಗಳೂರು: ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ನಾಲ್ಕನೇ ಏಕದಿನ ಪಂದ್ಯ ಸೋತಿರುವುದು ಅಭಿಮಾನಿಗಳಿಗೆ ಒಂಚೂರು ಇಷ್ಟವಾಗಿಲ್ಲ. ಇದೀಗ ಧೋನಿಗೆ ಕೆಳ ಕ್ರಮಾಂಕ ಕೊಟ್ಟ ಕೊಹ್ಲಿ ಮೇಲೆ ಅವರ ಸಿಟ್ಟು ತಿರುಗಿದೆ.
ಹಾರ್ದಿಕ್ ಪಾಂಡ್ಯ, ಕೇದಾರ್ ಜಾದವ್ ಮುಂತಾದ ಯುವ ಬ್ಯಾಟ್ಸ್ ಮನ್ ಗಳಿಗೆ ಮೇಲಿನ ಕ್ರಮಾಂಕದ ಬ್ಯಾಟಿಂಗ್ ಕೊಡಲು ಕೊಹ್ಲಿ ಧೋನಿಯಂತಹ ಹಿರಿಯ ಆಟಗಾರನಿಗೆ ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್ ಕೊಟ್ಟಿದ್ದರು.
ನಿನ್ನೆಯ ಪಂದ್ಯದಲ್ಲಿ ಧೋನಿ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದಿದ್ದು ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿದೆ. ಧೋನಿಯಂತಹ ಆಟಗಾರರಿಗೆ ಇಷ್ಟು ಕೆಳ ಕ್ರಮಾಂಕದ ಬ್ಯಾಟಿಂಗ್ ಹೊಂದುವುದಿಲ್ಲ ಎಂದು ಟ್ವಿಟರಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ