Publish Date: Fri, 29 Sep 2017 (13:32 IST)
Updated Date: Fri, 29 Sep 2017 (13:36 IST)
ಬೆಂಗಳೂರು: ಕ್ಯಾಪ್ಟನ್ ಕೂಲ್ ಎಂದೇ ಹೆಸರುವಾಸಿಯಾಗಿದ್ದ ಧೋನಿ ಮತ್ತೊಮ್ಮೆ ಮೈದಾನದಲ್ಲಿ ತಾಳ್ಮೆ ಕಳೆದುಕೊಂಡ ಘಟನೆ ನಿನ್ನೆಯ ಪಂದ್ಯದಲ್ಲಿ ನಡೆದಿದೆ.
ಆಸ್ಟ್ರೇಲಿಯಾ ಬ್ಯಾಟಿಂಗ್ ಮಾಡುತ್ತಿದ್ದಾಗ ಫೀಲ್ಡಿಂಗ್ ಮಾಡಲು ಸೋಮಾರಿತನ ತೋರಿದ ಯುವ ಬೌಲರ್ ಅಕ್ಸರ್ ಪಟೇಲ್ ಮೇಲೆ ಧೋನಿ ಸಿಟ್ಟಿಗೆದ್ದ ಘಟನೆ ನಡೆದಿದೆ. ಇದಕ್ಕಿಂತ ಮೊದಲು ದ್ವಿತೀಯ ಪಂದ್ಯದಲ್ಲೂ ಧೋನಿ ಒಮ್ಮೆ ಸಹ ಆಟಗಾರನೆಡೆಗೆ ಕೆಂಗಣ್ಣು ಬೀರಿದ್ದರು.
ಇದು ನಡೆದಿದ್ದು 46 ನೇ ಓವರ್ ನಲ್ಲಿ. ಮೊಹಮ್ಮದ್ ಶಮಿ ಬೌಲಿಂಗ್ ನಲ್ಲಿ ಆಸೀಸ್ ಬ್ಯಾಟ್ಸ್ ಮನ್ ಪ್ಯಾಡ್ ಗೆ ತಗುಲಿ ಬಾಲ್ ಥರ್ಡ್ ಮ್ಯಾನ್ ಕಡೆಗೆ ಸಾಗಿತ್ತು. ಆದರೆ ಬಾಲ್ ಸರಿಯಾಗಿ ಫೀಲ್ಡಿಂಗ್ ಮಾಡದ ಅಕ್ಸರ್ ನಂತರ ಕೀಪರ್ ಧೋನಿ ಕಡೆಗೆ ಬಾಲ್ ಎಸೆಯುವಾಗಲೂ ಪ್ರಮಾವೆಸಗಿದ್ದರು. ಇದರಿಂದ ಕೋಪಗೊಂಡ ಧೋನಿ ಅಕ್ಸರ್ ಕಡೆಗೆ ಕೆಂಗಣ್ಣು ಬೀರಿದ್ದಲ್ಲದೆ, ಜೋರಾಗಿ ಬೈಯ್ದರು. ಪಕ್ಕದಲ್ಲಿದ್ದ ನಾಯಕ ಕೊಹ್ಲಿ ಕೂಡಾ ಕೋಪದಿಂದಲೇ ಕೆಂಗಣ್ಣು ಬೀರಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ