Select Your Language

Notifications

webdunia
webdunia
webdunia
webdunia

ನಾಲ್ಕನೇ ಏಕದಿನ ಪಂದ್ಯಕ್ಕೂ ಮೊದಲು ಬಿಸಿಸಿಐ ಎಡವಟ್ಟು

ಭಾರತ-ಆಸ್ಟ್ರೇಲಿಯಾ ಕ್ರಿಕೆಟ್ ಸರಣಿ
ಬೆಂಗಳೂರು , ಶುಕ್ರವಾರ, 29 ಸೆಪ್ಟಂಬರ್ 2017 (10:30 IST)
ಬೆಂಗಳೂರು: ಚಿನ್ನಸ್ವಾಮಿ ಮೈದಾನದಲ್ಲಿ ನಿನ್ನೆ ಆಸ್ಟ್ರೇಲಿಯಾ ವಿರುದ್ಧ ನಡೆದ ನಾಲ್ಕನೇ ಏಕದಿನ ಪಂದ್ಯದ ಕುರಿತಾಗಿ ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಪೇಜ್ ನಲ್ಲಿ ಎಡವಟ್ಟು ಮಾಡಿದೆ.


ಟಾಸ್ ಆದ ಕೂಡಲೇ ಅದರ ಬಗ್ಗೆ ತನ್ನ ಟ್ವಿಟರ್ ಪೇಜ್ ನಲ್ಲಿ ಪ್ರಕಟಣೆ ಕೊಟ್ಟ ಬಿಸಿಸಿಐ ನಾಲ್ಕನೇ ಏಕದಿನ ಪಂದ್ಯ ಎನ್ನುವ ಬದಲು ಮೊದಲ ಟಿ 20 ಎಂದು ಬರೆದು ಎಡವಟ್ಟು ಮಾಡಿದೆ.

‘ಮೊದಲ ಟಿ20 ಪಂದ್ಯ. ಆಸ್ಟ್ರೇಲಿಯಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ’ ಎಂದಿದೆ. ಅದೂ ಎರಡೆರಡು ಬಾರಿ ಈ ಮೆಸೇಜ್ ಹಾಕಿ ಟ್ವಿಟರಿಗರ ಟೀಕೆಗೆ ಗುರಿಯಾಗಿದೆ. ಟ್ವಿಟರಿಗರು ಟೀಕೆ ವ್ಯಕ್ತಪಡಿಸುತ್ತಿದ್ದಂತೆ ಬಿಸಿಸಿಐ ಸಂದೇಶ ಡಿಲೀಟ್ ಮಾಡಿದೆ. ಆದರೆ ಅಷ್ಟರಲ್ಲಿ ಹಲವರು ಇದನ್ನು ಓದಿಯಾಗಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕೊನೆಯ ಕ್ಷಣದಲ್ಲಿ ಇಂದು ನಡೆಯಲಿಲ್ಲ ಧೋನಿ ಮ್ಯಾಜಿಕ್