Publish Date: Sat, 30 Sep 2017 (08:31 IST)
Updated Date: Sat, 30 Sep 2017 (08:36 IST)
ಬೆಂಗಳೂರು: ಧೋನಿ ವಿಕೆಟ್ ಹಿಂದುಗಡೆ ಮಿಂಚಿನಂತ ಆಟಗಾರ ಎಂದೇ ಖ್ಯಾತರಾದವರು. ಅವರ ಕೈಗೆ ಬಾಲ್ ಸಿಕ್ಕರೆ ಗುರಿ ತಪ್ಪುವ ಮಾತೇ ಇಲ್ಲ ಎಂದೇ ಎಲ್ಲರೂ ನಂಬಿದ್ದಾರೆ. ಆದರೆ ಆ ನಂಬಿಕೆಯೂ ಸುಳ್ಳಾದ ಘಟನೆ ನಡೆದಿತ್ತು.
ಬೆಂಗಳೂರಿನಲ್ಲಿ ನಡೆದ ನಾಲ್ಕನೇ ಏಕದಿನ ಪಂದ್ಯದ ವೇಳೆ ಧೋನಿ ಅಪರೂಪಕ್ಕೆ ತಪ್ಪು ಮಾಡಿದರು. ಏರಾನ್ ಪಿಂಚ್ ಅವರನ್ನು ಸುಲಭವಾಗಿ ಸ್ಟಂಪ್ ಔಟ್ ಮಾಡುವ ಅವಕಾಶವನ್ನು ಮಿಸ್ ಮಾಡಿಕೊಂಡರು.
ತಮ್ಮ ತಪ್ಪಿಗೆ ಧೋನಿ ನಾಚಿಕೆಯಿಂದ ಗ್ಲೌಸ್ ಗಳಿಂದ ಮುಖ ಮುಚ್ಚಿಕೊಂಡ ಘಟನೆ ನಡೆದಿದೆ. ಧೋನಿಯ ಈ ಪ್ರಮಾದದಿಂದಾಗಿ ಯುವ ಬೌಲರ್ ಯಜುವೇಂದ್ರ ಚಾಹಲ್ ಗೆ ಸಿಗಬೇಕಿದ್ದ ವಿಕೆಟ್ ಮಿಸ್ ಆಯಿತು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ