Publish Date: Tue, 03 Oct 2017 (09:42 IST)
Updated Date: Tue, 03 Oct 2017 (09:44 IST)
ಮುಂಬೈ: ಉತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ತಂಡದಿಂದ ಕೈ ಬಿಟ್ಟಿರುವ ಆಯ್ಕೆ ಸಮಿತಿ ನಿರ್ಧಾರದ ಬಗ್ಗೆ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಅಜಿಂಕ್ಯಾ ರೆಹಾನೆ ಪ್ರತಿಕ್ರಿಯಿಸಿದ್ದಾರೆ.
ನನಗೆ ಇನ್ನೂ ಹೆಚ್ಚು ಕ್ರಿಕೆಟ್ ಆಡಲು ಅವಕಾಶ ಬೇಕಾಗಿದೆ. ಹಾಗಂತ ತಂಡದಿಂದ ಕೈಬಿಟ್ಟಿದ್ದಕ್ಕೆ ಬೇಸರವಿಲ್ಲ. ತಂಡದ ವ್ಯವಸ್ಥಾಪಕರು ಮತ್ತು ಆಯ್ಕೆ ಸಮಿತಿ ನಿರ್ಧಾರವನ್ನು ಗೌರವಿಸುತ್ತೇನೆ ಎಂದು ರೆಹಾನೆ ಹೇಳಿಕೊಂಡಿದ್ದಾರೆ.
ಸದ್ಯಕ್ಕೆ ತಂಡದಲ್ಲಿ ತೀವ್ರ ಪೈಪೋಟಿಯಿದೆ. ಸ್ಪರ್ಧೆ ಅನಿವಾರ್ಯ. ಹಾಗಿದ್ದರೆ ಮಾತ್ರ ಉತ್ತಮ ಪ್ರದರ್ಶನ ನೀಡಲು ಉತ್ಸಾಹ ಬರುತ್ತದೆ ಎಂದು ಅವರು ಬೇಸರದಲ್ಲೂ ಸಮಾಧಾನಪಟ್ಟುಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ