Select Your Language

Notifications

webdunia
webdunia
webdunia
webdunia

ತಮ್ಮನಿಗೆ ಕೊಟ್ಟ ಮಾತು ಉಳಿಸಿಕೊಂಡ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ

ತಮ್ಮನಿಗೆ ಕೊಟ್ಟ ಮಾತು ಉಳಿಸಿಕೊಂಡ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ
ಮುಂಬೈ , ಮಂಗಳವಾರ, 3 ಅಕ್ಟೋಬರ್ 2017 (11:43 IST)
ಮುಂಬೈ: ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯಕ್ಕೆ ಆಯ್ಕೆಯಾದ ಸುದ್ದಿ ಕೇಳಿಬರುತ್ತಿದ್ದಂತೆ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ಕೃಣಾಲ್ ಪಾಂಡ್ಯಗೆ ಮಾತು ಕೊಟ್ಟಿದ್ದರು. ಅದನ್ನು ಅವರೀಗ ಪೂರೈಸಿದ್ದಾರೆ.

 
ಅಷ್ಟಕ್ಕೂ ಹಾರ್ದಿಕ್ ಪಾಂಡ್ಯ ತಮ್ಮನಿಗೆ ಏನಂತ ಮಾತುಕೊಟ್ಟಿದ್ದರು? ಆಸ್ಟ್ರೇಲಿಯಾ ವಿರುದ್ಧ ಸರಣಿಗೆ ಆಯ್ಕೆಯಾದ ಖುಷಿಗೆ ಹಾರ್ದಿಕ್ ತಮ್ಮನ ಬಳಿ ‘ನೋಡ್ತಾ ಇರು, ಈ ಸ್ಟೇಜ್ ಗೆ ಬೆಂಕಿ ಹಚ್ತೀನಿ’ ಎಂದಿದ್ದರಂತೆ.

ಅಂದರೆ ಆಸೀಸ್ ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡುತ್ತೇನೆಂದು ಸಹೋದರನಿಗೆ ಕೊಟ್ಟ ಮಾತನ್ನು ಚಾಚೂ ತಪ್ಪದೇ ಪಾಲಿಸಿದ್ದಾರೆ ಹಾರ್ದಿಕ್. ಒಟ್ಟು ಐದು ಪಂದ್ಯಗಳಲ್ಲಿ ಹಾರ್ದಿಕ್ 222 ರನ್ ಕಲೆ ಹಾಕಿದ್ದಲ್ಲದೆ, 6 ವಿಕೆಟ್ ಕಬಳಿಸಿದ್ದರು.  ಸರಣಿ ಶ್ರೇಷ್ಠರಾಗಿದ್ದರು. ಅದರೊಂದಿಗೆ ಮಾತೂ ಉಳಿಸಿಕೊಂಡರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಧೋನಿ ಮಾತು ನಂಬಿ ಮೂರ್ಖನಾಗಿದ್ದ ವಿರಾಟ್ ಕೊಹ್ಲಿ!