Publish Date: Wed, 11 Oct 2017 (08:40 IST)
Updated Date: Wed, 11 Oct 2017 (08:41 IST)
ಮುಂಬೈ: ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾಗೆ ಆಯ್ಕೆಯಾಗಿರುವ ವೇಗಿ ಆಶಿಷ್ ನೆಹ್ರಾಗೆ ಇದು ತಮ್ಮ ವೃತ್ತಿ ಬದುಕಿನ ಕೊನೆಯ ಸರಣಿಯೇ?
ಹಾಗೊಂದು ಅನುಮಾನ ಕಾಡುತ್ತಿದೆ. 38 ವರ್ಷದ ವೇಗಿಯನ್ನು ಕಿರು ಮಾದರಿಗೆ ಆಯ್ಕೆ ಮಾಡಿದ್ದಕ್ಕೆ ಭಾರೀ ಟೀಕೆ ವ್ಯಕ್ತವಾಗಿತ್ತು. ಆದರೆ ಬಿಸಿಸಿಐ ತನ್ನ ಆಯ್ಕೆಯನ್ನು ಸಮರ್ಥಿಸಿಕೊಂಡಿತ್ತು. ಆದರೆ ಮೂಲವೊಂದರ ಪ್ರಕಾರ ಇದು ನೆಹ್ರಾ ನಿವೃತ್ತಿಗೆ ಹಾಕಿಕೊಟ್ಟ ವೇದಿಕೆಯಾಗಿತ್ತು ಎನ್ನಲಾಗಿದೆ.
ಈ ಸರಣಿ ಮುಗಿದ ಬಳಿಕ ವೃತ್ತಿ ಬದುಕಿಗೆ ನಿವೃತ್ತಿ ಹೇಳಲು ನೆಹ್ರಾ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಈ ಸರಣಿಯಲ್ಲದಿದ್ದರೆ, ಮುಂಬರುವ ನ್ಯೂಜಿಲೆಂಡ್ ಸರಣಿಯ ಬಳಿಕವಾದರೂ ನಿವೃತ್ತಿ ಘೋಷಿಸುವ ಬಗ್ಗೆ ನೆಹ್ರಾ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ