Publish Date: Mon, 09 Oct 2017 (10:11 IST)
Updated Date: Mon, 09 Oct 2017 (10:13 IST)
ನವದೆಹಲಿ: ಭುಜದ ಗಾಯಕ್ಕೆ ತುತ್ತಾಗಿರುವ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ತವರಿಗೆ ಮರಳಿದ್ದಾರೆ. ಮೂರು ಟಿ20 ಪಂದ್ಯಗಳ ಸರಣಿಯಿಂದ ಔಟಾಗಿದ್ದಾರೆ.
ಮೊದಲ ಟಿ20 ಪಂದ್ಯಕ್ಕೆ ಮೊದಲೇ ಅಭ್ಯಾಸ ಮಾಡುವಾಗ ಸ್ಟೀವ್ ಸ್ಮಿತ್ ಭುಜಕ್ಕೆ ಗಾಯ ಮಾಡಿಕೊಂಡಿದ್ದರು. ಗಾಯದ ಕಾರಣದಿಂದಾಗಿ ಸ್ಮಿತ್ ಸರಣಿಯಿಂದ ಹೊರಗುಳಿದಿದ್ದಾರೆ.
ಸ್ಮಿತ್ ಅನುಪಸ್ಥಿತಿಯಲ್ಲಿ ಡೇವಿಡ್ ವಾರ್ನರ್ ತಂಡವನ್ನು ಮುನ್ನಡೆಸಲಿದ್ದಾರೆ. ಹೋಗುವ ಮೊದಲು ಭಾರತದ ಬಗ್ಗೆ ಮೆಚ್ಚುಗೆಯ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಈ ಪ್ರವಾಸ ನಾವು ನೆನೆಸಿದಂತೆ ನಡೆಯಲಿಲ್ಲ. ಆದರೂ ಭಾರತ ಬೆಚ್ಚನೆಯ ತಾಣ ಎಂದು ಸ್ಮಿತ್ ಹೊಗಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ