ಮುಂಬೈ: ಟೀಂ ಇಂಡಿಯಾ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ಆಟಗಾರರು ಆಟದ ಹೊರತಾಗಿ ಮಾತಿನ ಚಕಮಕಿ ಯಾಕೆ ನಡೆಸದೇ ಸೈಲಂಟಾಗಿದ್ದಾರೆ ಎಂದು ಯೋಚಿಸುತ್ತಿದ್ದೀರಾ? ಇದಕ್ಕೆ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಬಳಿ ಉತ್ತರವಿದೆ.
									
										
								
																	
 
‘ಅವರಿಗೆ ಮುಂದಿನ ಐಪಿಎಲ್ ಋತುವಿನ ಬಿಡ್ಡಿಂಗ್ ನದ್ದೇ ಚಿಂತೆ. ಒಂದು ವೇಳೆ ಭಾರತೀಯ ಆಟಗಾರರೊಂದಿಗೆ ಕಿರಿಕ್ ಮಾಡಿಕೊಂಡರೆ, ಮುಂದಿನ ಹರಾಜು ಪ್ರಕ್ರಿಯೆಯಲ್ಲಿ ಭಾರತದ ಫ್ರಾಂಚೈಸಿಗಳು ಆಸ್ಟ್ರೇಲಿಯನ್ ಆಟಗಾರರ ಮೇಲೆ ದೊಡ್ಡ ಮೊತ್ತದ ಹೂಡಿಕೆ ಮಾಡುವುದಿಲ್ಲ. ಬಹುಶಃ ಅವರಿಗೆ ಇದೇ ಚಿಂತೆಯಿರಬೇಕು. ಅದಕ್ಕೇ ಸೈಲಂಟಾಗಿದ್ದಾರೆ’ ಎಂದು ಸೆಹ್ವಾಗ್ ವಿಶ್ಲೇಷಿಸಿದ್ದಾರೆ.
									
			
			 
 			
 
 			
			                     
							
							
			        							
								
																	ಅಷ್ಟೇ ಅಲ್ಲದೆ, ಆಸ್ಟ್ರೇಲಿಯಾ ನಾಯಕನ   ಬಳಿ ಹೆಚ್ಚಿನ ಆಯ್ಕೆಗಳಿಲ್ಲ. ಕೆಲವೇ ಸ್ಟಾರ್ ಆಟಗಾರರನ್ನೇ ನೆಚ್ಚಿಕೊಳ್ಳಬೇಕಿದೆ. ಇದೇ ಕಾರಣಕ್ಕೆ ಆಸ್ಟ್ರೇಲಿಯಾ ಮಂಕು ಕವಿದಂತೆ ಇದೆ ಎಂದು ಸೆಹ್ವಾಗ್ ಸಂದರ್ಶನವೊಂದರಲ್ಲಿ ಅಭಿಪ್ರಾಯಪಟ್ಟಿದ್ದಾರೆ.
									
										
								
																	ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ 
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ