Publish Date: Wed, 11 Oct 2017 (09:27 IST)
Updated Date: Wed, 11 Oct 2017 (09:29 IST)
ಗುವಾಹಟಿ: ದ್ವಿತೀಯ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಅಮೋಘ ಗೆಲುವು ಸಾಧಿಸಿ ಸರಣಿ ಸಮಬಲ ಸಾಧಿಸಿದ ಆಸ್ಟ್ರೇಲಿಯಾ ಆಟಗಾರರಿಗೆ ಕಲ್ಲೇಟಿನ ಸ್ವಾಗತ ದೊರಕಿದೆ.
ಪಂದ್ಯದ ನಂತರ ಹೋಟೆಲ್ ಗೆ ತೆರಳುವ ಬಸ್ ಗೆ ದುಷ್ಕರ್ಮಿಗಳು ಕಲ್ಲು ಎಸೆದಿದ್ದು, ಗಾಜು ಒಡೆದಿದೆ. ಇದನ್ನು ಆಸ್ಟ್ರೇಲಿಯಾ ಕ್ರಿಕೆಟಿಗ ಏರಾನ್ ಪಿಂಚ್ ತಮ್ಮ ಟ್ವಿಟರ್ ನಲ್ಲಿ ಪ್ರಕಟಿಸಿದ್ದಾರೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಆದರೆ ಘಟನೆಯಿಂದ ಆತಂಕಕ್ಕೊಳಗಾಗಿದ್ದೇವೆ ಎಂದು ಪಿಂಚ್ ಹೇಳಿದ್ದಾರೆ.
ತಕ್ಷಣವೇ ಪ್ರತಿಕ್ರಿಯಿಸಿರುವ ಅಸ್ಸಾಂ ಸರ್ಕಾರದ ಹಿರಿಯ ಸಚಿವ ಹಿಮಾಂತ ಬಿಸ್ವಾ ಆಸೀಸ್ ತಂಡದ ಕ್ಷಮೆ ಯಾಚಿಸಿದ್ದು, ತಪ್ಪಿತಸ್ಥರನ್ನು ಗುರುತಿಸಿ ತಕ್ಕ ಶಾಸ್ತಿ ಮಾಡುವುದಾಗಿ ಭರವಸೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ