ಬೆಂಗಳೂರಿನಲ್ಲಿ ಈ ಪರೀಕ್ಷೆ ಪಾಸಾದ್ರು ರವಿಚಂದ್ರನ್ ಅಶ್ವಿನ್

ಗುರುವಾರ, 12 ಅಕ್ಟೋಬರ್ 2017 (10:03 IST)
ಬೆಂಗಳೂರು: ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಬೆಂಗಳೂರು ನ್ಯಾಷನಲ್ ಅಕಾಡೆಮಿಯಲ್ಲಿ ಟೀಂ ಇಂಡಿಯಾಗೆ ಅರ್ಹತೆ ಗಿಟ್ಟಿಸುವ ಯೋ ಯೋ ಟೆಸ್ಟ್ ಪಾಸಾಗಿದ್ದಾರೆ.

 
ಈ ವಿಷಯವನ್ನು ಸ್ವತಃ ಅಶ್ವಿನ್ ತಮ್ಮ ಟ್ವಿಟರ್ ಪೇಜ್ ನಲ್ಲಿ ಪ್ರಕಟಿಸಿದ್ದಾರೆ. ಇತ್ತೀಚೆಗೆ ಯುವರಾಜ್ ಸಿಂಗ್, ಸುರೇಶ್ ರೈನಾ ಯೋ ಯೋ ಟೆಸ್ಟ್ ಪಾಸಾಗದೇ ಇರುವ ಕಾರಣಕ್ಕೆ ಟೀಂ ಇಂಡಿಯಾಗೆ ಅರ್ಹತೆ ಗಿಟ್ಟಿಸಲಿಲ್ಲ ಎನ್ನುವುದನ್ನು ಇಲ್ಲಿ ಸ್ಮರಿಸಬಹುದು.

ಅಶ್ವಿನ್ ಕೌಂಟಿ ಕ್ರಿಕೆಟ್ ಆಡಿ ಮುಗಿಸಿ ಇದೀಗ ತವರಿಗೆ ಮರಳಿದ್ದಾರೆ. ಲಂಕಾ ಮತ್ತು ಆಸೀಸ್ ಸರಣಿಗೆ ಅಶ್ವಿನ್ ಆಯ್ಕೆಯಾಗಿರಲಿಲ್ಲ. ಇದೀಗ ಯೋ ಯೋ ಟೆಸ್ಟ್ ಪಾಸಾಗಿರುವ ಹಿನ್ನಲೆಯಲ್ಲಿ ಮುಂಬರುವ ನ್ಯೂಜಿಲೆಂಡ್ ಸರಣಿಗೆ ಆಯ್ಕೆಯಾಗುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಈ ಹಿರಿಯ ಟೀಂ ಇಂಡಿಯಾ ಆಟಗಾರನಿಗೆ ಇದೇ ಕೊನೆಯ ಪಂದ್ಯ