Publish Date: Fri, 13 Oct 2017 (10:46 IST)
Updated Date: Fri, 13 Oct 2017 (10:48 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಮುಗಿಸಿ ಹೊಸದೊಂದು ಸವಾಲಿಗೆ ಸಿದ್ಧರಾಗಬೇಕಿದೆ. ಈ ಸವಾಲೆಸೆದಿರುವುದು ಬಾಲಿವುಡ್ ನಟ ರಣಬೀರ್ ಕಪೂರ್.
ರಣಬೀರ್ ಕಪೂರ್ ಮತ್ತು ವಿರಾಟ್ ಕೊಹ್ಲಿ ಮೈದಾನದಲ್ಲಿ ಪರಸ್ಪರ ತೊಡೆ ತಟ್ಟಲಿದ್ದಾರೆ. ಆದರೆ ಇದು ಕ್ರಿಕೆಟ್ ಗಾಗಿ ಅಲ್ಲ. ಫುಟ್ ಬಾಲ್ ಪಂದ್ಯವೊಂದರಲ್ಲಿ ಇವರಿಬ್ಬರ ತಂಡ ಶಕ್ತಿ ಪ್ರದರ್ಶನ ಮಾಡಲಿದೆ.
ಚ್ಯಾರಿಟಿ ಸಂಸ್ಥೆಯೊಂದರ ಸಹಾಯಾರ್ಥ ಪಂದ್ಯದಲ್ಲಿ ಇವರಿಬ್ಬರ ತಂಡ ಪರಸ್ಪರ ಮುಖಾಮುಖಿಯಾಗಲಿದೆ. ಇದು ಮುಂಬೈನ ಅಂಧೇರಿ ಸ್ಪೋರ್ಟ್ಸ್ ಕ್ಲಬ್ ನಲ್ಲಿ ನಡೆಯಲಿದೆ. ವಿಶೇಷವೆಂದರೆ ಕೊಹ್ಲಿ ತಂಡದಲ್ಲಿ ಧೋನಿ, ಮನೀಶ್ ಪಾಂಡೆ, ಕೆಎಲ್ ರಾಹುಲ್, ಅಜಿಂಕ್ಯಾ ರೆಹಾನೆ, ಉಮೇಶ್ ಯಾದವ್, ಅಶ್ವಿನ್ ರಂತಹ ಘಟಾನುಘಟಿ ಕ್ರಿಕೆಟಿಗರು ಇರುತ್ತಾರೆ. ರಣಬೀರ್ ತಂಡದಲ್ಲಿ ಅಭಿಷೇಕ್ ಬಚ್ಚನ್, ರಾಜ್ ಕುಂದ್ರಾ, ಆದಿತ್ಯಾ ಕಪೂರ್ ಮುಂತಾದವರಿರಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ