Publish Date: Sat, 14 Oct 2017 (08:50 IST)
Updated Date: Sat, 14 Oct 2017 (08:52 IST)
ಹೈದರಾಬಾದ್: ಮಳೆಯಿಂದಾಗಿ ಹೈದರಾಬಾದ್ ನಲ್ಲಿ ನಡೆಯಬೇಕಿದ್ದ ಆಸ್ಟ್ರೇಲಿಯಾ ವಿರುದ್ಧ ಮೂರನೇ ಟಿ20 ಪಂದ್ಯ ರದ್ದಾಗಿತ್ತು. ಈ ವೇಳೆ ತಾಳ್ಮೆಯಿಂದ ಕೂತಿದ್ದ ಪ್ರೇಕ್ಷಕರನ್ನು ನಾಯಕ ಕೊಹ್ಲಿ ಮತ್ತು ಧೋನಿ ರಂಜಿಸಿದರು.
ಮೈದಾನ ಸಿಬ್ಬಂದಿ ಮೈದಾಣ ಒಣಗಿಸಲು ಶತಾಯ ಗತಾಯ ಪ್ರಯತ್ನ ನಡೆಸುತ್ತಿದ್ದರೆ, ಪ್ರೇಕ್ಷಕರು ತಾಳ್ಮೆಯಿಂದಲೇ ಪಂದ್ಯಕ್ಕಾಗಿ ಕಾಯುತ್ತಿದ್ದರು. ಆದರೆ ಅವರ ಆಸೆ ಈಡೇರಲೇ ಇಲ್ಲ. ಮೈದಾನ ಸಿಬ್ಬಂದಿಯ ಪ್ರಯತ್ನ ಕೈಗೂಡದೇ ಪಂದ್ಯ ರದ್ದಾಯಿತು.
ಈ ವೇಳೆ ಮೈದಾನಕ್ಕಿಳಿದ ಭಾರತೀಯ ಆಟಗಾರರು ಬ್ಯಾಟಿಂಗ್ ನಡೆಸಿ ಪ್ರೇಕ್ಷಕರಿಗೆ ಸ್ವಲ್ಪ ಮಟ್ಟಿಗೆ ಖುಷಿ ನೀಡಿದರು. ಬಲಗೈ ಬ್ಯಾಟ್ಸ್ ಮನ್ ಗಳಾದ ಧೋನಿ, ಕೊಹ್ಲಿ ಎಡಗೈಯಲ್ಲಿ ಬ್ಯಾಟಿಂಗ್ ಮಾಡಿ ಪ್ರೇಕ್ಷಕರನ್ನು ರಂಜಿಸಿದದರು. ಕಳೆದೆರಡು ಪಂದ್ಯಕ್ಕೂ ಮಳೆ ಭೀತಿಯಿತ್ತಾದರೂ, ಪಂದ್ಯ ನಡೆದಿತ್ತು. ಆದರೆ ಈ ಬಾರಿ ಸಂಪೂರ್ಣವಾಗಿ ರದ್ದಾಗಿ ಪ್ರೇಕ್ಷಕರಿಗೆ ನಿರಾಸೆಯಾಗಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ