Select Your Language

Notifications

webdunia
webdunia
webdunia
webdunia

ಬಾಲಿವುಡ್ ಮಂದಿಯ ಸೋಲಿಸಿದ ಧೋನಿ ಡ್ಯಾನ್ಸ್!

ಬಾಲಿವುಡ್ ಮಂದಿಯ ಸೋಲಿಸಿದ ಧೋನಿ ಡ್ಯಾನ್ಸ್!
ಮುಂಬೈ , ಸೋಮವಾರ, 16 ಅಕ್ಟೋಬರ್ 2017 (09:28 IST)
ಮುಂಬೈ: ಕ್ರಿಕೆಟ್ ಇರಲಿ, ಫುಟ್ ಬಾಲ್ ಇರಲಿ ತಾವು ಯಾವತ್ತಿದ್ದರೂ ಕಿಂಗ್ ಎಂದು ಧೋನಿ ನಿನ್ನೆ ನಡೆದ ಚ್ಯಾರಿಟಿ ಫುಟ್ ಬಾಲ್ ಪಂದ್ಯದಲ್ಲಿ ಸಾಬೀತುಪಡಿಸಿದರು. ಬಾಲಿವುಡ್ ನ ಆಲ್ ಸ್ಟಾರ್ಸ್ ತಂಡದ ವಿರುದ್ಧ ವಿರಾಟ್ ಕೊಹ್ಲಿ ನೇತೃತ್ವದ ಆಲ್ ಹಾರ್ಟ್ಸ್ ತಂಡ ಗೆಲುವು ಸಾಧಿಸಿತು.

 
ಚ್ಯಾರಿಟಿಯೊಂದಕ್ಕೆ ಹಣ ಸಂಗ್ರಹಿಸುವ ಉದ್ದೇಶದಿಂದ ನಡೆದ ಪಂದ್ಯದಲ್ಲಿ ಬಾಲಿವುಡ್ ನ ತಂಡವನ್ನು ಅಭಿಷೇಕ್ ಬಚ್ಚನ್ ಮುನ್ನಡೆಸಿದ್ದರೆ, ಕ್ರೀಡಾಳುಗಳ ತಂಡಕ್ಕೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಾಯಕರಾಗಿದ್ದರು.

ನಾಯಕ ಕೊಹ್ಲಿಯೇ ಆದರೂ, ಇಡೀ ಪಂದ್ಯದಲ್ಲಿ ಗಮನ ಸೆಳೆದಿದ್ದು ಧೋನಿ. ಆರಂಭದಲ್ಲಿಯೇ ಎರಡು ಗೋಲುಗಳ ಮೂಲಕ ಮಿಂಚಿದ ಧೋನಿ ನಂತರ ಮೈದಾನದಲ್ಲೇ ನೃತ್ಯ ಮಾಡಿ ಗೋಲು ಗಳಿಸಿದ ಸಂಭ್ರಮವನ್ನು ಆಚರಿಸಿ ನೆರೆದಿದ್ದವರನ್ನು ರಂಜಿಸಿದರು. ಮುಂಬೈಯ ಅಂಧೇರಿ ಸ್ಪೋರ್ಟ್ಸ್ ಕ್ಲಬ್ ಆವರಣದಲ್ಲಿ ಈ ಪಂದ್ಯ ನಡೆಯಿತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಈ ರೀತಿ ಸಲಹೆ ಕೊಡೋ ಕೆಲಸ ಯುವರಾಜ್ ಸಿಂಗ್ ಗೆ ಬೇಕಿತ್ತಾ?!