Publish Date: Mon, 16 Oct 2017 (09:12 IST)
Updated Date: Mon, 16 Oct 2017 (09:15 IST)
ನವದೆಹಲಿ: ದೀಪಾವಳಿ ಹತ್ತಿರ ಬರುತ್ತಿದ್ದಂತೆ ಪಟಾಕಿ ಸಿಡಿಸಬೇಡಿ, ಮಾಲಿನ್ಯವಾಗುತ್ತದೆ ಎಂದು ಬುದ್ಧಿವಾದ ಹೇಳುವ ಸ್ಟಾರ್ ಗಳಿದ್ದಾರೆ. ಆದರೆ ಹಾಗೇ ಮಾಡಲು ಹೋಗಿ ಕ್ರಿಕೆಟಿಗ ಯುವರಾಜ್ ಸಿಂಗ್ ಸರಿಯಾಗಿಯೇ ಅಭಿಮಾನಿಗಳಿಂದ ಜಾಡಿಸಿಕೊಂಡಿದ್ದಾರೆ.
ಪಟಾಕಿ, ಅಬ್ಬರ, ಮಾಲಿನ್ಯವಿಲ್ಲದ ದೀಪಾವಳಿ ಆಚರಿಸಿ ಎಂದು ಯುವರಾಜ್ ಸಿಂಗ್ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಸಲಹೆ ನೀಡಿದ್ದರು. ಆದರೆ ಅವರು ನಿರೀಕ್ಷಿಸಿರದ ರೀತಿಯಲ್ಲಿ ಅಭಿಮಾನಿಗಳು ಅವರಿಗೆ ಎದಿರೇಟು ಕೊಟ್ಟಿದ್ದಾರೆ.
ಯಾರೋ ಒಬ್ಬ ಅಭಿಮಾನಿ ಯುವರಾಜ್ ಸಿಂಗ್ ಮದುವೆಯ ಫೋಟೋ ಹಾಕಿದ್ದಾರೆ. ಇದರಲ್ಲಿ ಯುವಿ ತಮ್ಮ ಪತ್ನಿಯ ಕೈ ಹಿಡಿದು ಜತೆಯಾಗಿ ಬರುತ್ತಿದ್ದರೆ, ಹಿಂದೆ ಪಟಾಕಿ ಸಿಡಿಯುವ ದೃಶ್ಯವಿದೆ. ಇದನ್ನು ತೋರಿಸಿ ನೀವು ನಿಮ್ಮ ಮದುವೆಯಲ್ಲಿ ಈ ರೀತಿ ಅಬ್ಬರ ಮಾಡಬಹುದಾದರೆ ನಾವ್ಯಾಕೆ ಮಾಡಬಾರದು ಎಂದು ಯುವರಾಜ್ ಸಿಂಗ್ ಗೆ ಅಭಿಮಾನಿಗಳು ಪ್ರಶ್ನಿಸಿದ್ದಾರೆ. ಆದರೆ ಕೆಲವರು ಯುವರಾಜ್ ಕರೆಗೆ ಸಕಾರಾತ್ಮಕವಾಗಿ ಓಗೊಟ್ಟವರೂ ಇದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ