Publish Date: Mon, 16 Oct 2017 (09:55 IST)
Updated Date: Mon, 16 Oct 2017 (09:57 IST)
ನವದೆಹಲಿ: ಭಾರತದ ವಿರುದ್ಧ ಕಿರು ಸರಣಿ ಆಡಲು ಭಾರತಕ್ಕೆ ಬಂದಿಳಿದಿರುವ ನ್ಯೂಜಿಲೆಂಡ್ ಕ್ರಿಕೆಟಿಗರಿಗೆ ಯುವ ಸ್ಪಿನ್ನರ್ ಗಳಾದ ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್ ರದ್ದೇ ಭಯ ಶುರುವಾಗಿದೆ.
ಇತ್ತೀಚೆಗೆ ಕಿರು ಮಾದರಿಯ ಕ್ರಿಕೆಟ್ ನಲ್ಲಿ ಭಾರೀ ಯಶಸ್ವಿಯಾಗುತ್ತಿರುವ ಈ ಯುವ ಜೋಡಿ ಆಸ್ಟ್ರೇಲಿಯನ್ನರಿಗೂ ನಡುಕ ಹುಟ್ಟಿಸಿದ್ದರು. ಇದೀಗ ನ್ಯೂಜಿಲೆಂಡ್ ಆಟಗಾರರೂ ಇವರನ್ನು ಎದುರಿಸುವ ಬಗೆ ಹೇಗೆಂದು ಚಿಂತಿತರಾಗಿದ್ದಾರಂತೆ.
‘ಕುಲದೀಪ್, ಯಜುವೇಂದ್ರ ಐಪಿಎಲ್ ನಲ್ಲಿ ಚೆನ್ನಾಗಿ ಪಳಗಿದ್ದಾರೆ. ಅವರನ್ನು ಎದುರಿಸುವುದೇ ದೊಡ್ಡ ಸವಾಲಾಗಿದೆ. ಚಿನಾಮನ್ ಬೌಲರ್ ಗಳನ್ನು ಎದುರಿಸುವುದು ಯಾವತ್ತಿದ್ದರೂ ಕಷ್ಟವೇ’ ಎಂದು ಕೀವೀಸ್ ನಾಯಕ ವಿಲಿಯಮ್ಸ್ ಸನ್ ಹೇಳಿದ್ದಾರೆ. ಅಕ್ಟೋಬರ್ 22 ರಿಂದ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಮೂರು ಏಕದಿನ ಸರಣಿಯ ಮೊದಲ ಪಂದ್ಯ ನಡೆಯಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ