Select Your Language

Notifications

webdunia
webdunia
webdunia
webdunia

ಬರ್ತ್ ಡೇ ಬಾಯ್ ಅನಿಲ್ ಕುಂಬ್ಳೆಯನ್ನು ಹೊಗಳಿ ಅಟ್ಟಕ್ಕೇರಿಸಿದ ಸೆಹ್ವಾಗ್

ಬರ್ತ್ ಡೇ ಬಾಯ್ ಅನಿಲ್ ಕುಂಬ್ಳೆಯನ್ನು ಹೊಗಳಿ ಅಟ್ಟಕ್ಕೇರಿಸಿದ ಸೆಹ್ವಾಗ್
ನವದೆಹಲಿ , ಮಂಗಳವಾರ, 17 ಅಕ್ಟೋಬರ್ 2017 (10:15 IST)
ನವದೆಹಲಿ: ಖ್ಯಾತ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆಗೆ ಇಂದು 47 ನೇ ಹುಟ್ಟು ಹಬ್ಬದ ಸಂಭ್ರಮ. ಮಾಜಿ ನಾಯಕ ಹಾಗೂ ಕೋಚ್ ಕುಂಬ್ಳೆ ಹುಟ್ಟುಹಬ್ಬಕ್ಕೆ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ವಿಶಿಷ್ಟವಾಗಿ ಶುಭ ಹಾರೈಸಿದ್ದಾರೆ.

 
ಅನಿಲ್ ಕುಂಬ್ಳೆ ಭಾರತೀಯ ಕ್ರಿಕೆಟ್ ನ ಧನ್ (ಸಂಪತ್ತು) ಎಂದು ಸೆಹ್ವಾಗ್ ಕೊಂಡಾಡಿದ್ದಾರೆ. ಅಷ್ಟೇ ಅಲ್ಲದೆ, ಅನಿಲ್ ಕುಂಬ್ಳೆಯ ನಿಕ್ ನೇಮ್ ಜಂಬೋ ಎಂಬ ಹೆಸರನ್ನು ತಮಾಷೆಯಾಗಿ ಕರೆದಿರುವ ಸೆಹ್ವಾಗ್ ‘ಶಂಭೋ ಶಿವ ಶಂಭೋ, ಜಂಬೋ ಹ್ಯಾಪಿ ಬರ್ತ್ ಡೇ’ ಎಂದು ಟ್ವೀಟ್ ಮಾಡಿದ್ದಾರೆ.

ಕನ್ನಡಿಗ ಸ್ಪಿನ್ ದಿಗ್ಗಜನ ಹುಟ್ಟುಹಬ್ಬಕ್ಕೆ ಸೆಹ್ವಾಗ್ ಅಲ್ಲದೆ, ಸಚಿನ್ ತೆಂಡುಲ್ಕರ್, ಸುರೇಶ್ ರೈನಾ, ವಿವಿಎಸ್ ಲಕ್ಷ್ಮಣ್ ಸೇರಿದಂತೆ  ಹಲವು ಶುಭ ಹಾರೈಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅಪ್ಪ ಧೋನಿಗೇ ನೀರು ಕುಡಿಸಿದ ಮಗಳು ಜೀವಾ