Publish Date: Mon, 09 Oct 2017 (09:19 IST)
Updated Date: Mon, 09 Oct 2017 (09:20 IST)
ಬೆಂಗಳೂರು: ನವರಸನಾಯಕ ಜಗ್ಗೇಶ್ ಕನ್ನಡ ಭಾಷೆ ಮೇಲಿರುವ ಪ್ರೇಮ ಎಷ್ಟು ಎಂಬುದು ಅವರ ಟ್ವಿಟರ್ ನೋಡಿದರೇ ಗೊತ್ತಾಗುತ್ತದೆ. ಇಂತಿಪ್ಪ ಜಗ್ಗೇಶ್ ಪರಭಾಷಾ ನಟಿ ಶ್ರುತಿ ಹಾಸನ್ ಕನ್ನಡಕ್ಕೆ ಬರಲ್ಲ ಎಂಬರ್ಥದಲ್ಲಿ ಟ್ವೀಟ್ ಮಾಡಿರುವುದನ್ನು ನೋಡಿ ಸಿಟ್ಟು ಬರದೇ ಇದ್ದಿತೇ?
ಶ್ರುತಿ ಹಾಸನ್ ಕನ್ನಡ ಸಿನಿಮಾವೊಂದರಲ್ಲಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಹರಿದಾಡುತ್ತಿತ್ತು. ಇದಕ್ಕೆ ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿದ ಶ್ರುತಿ ‘ಸದ್ಯಕ್ಕೆ ಕನ್ನಡ ಚಿತ್ರದಲ್ಲಿ ನಟಿಸುವ ಯಾವ ಯೋಚನೆಯೂ ನನಗಿಲ್ಲ. ಇದೆಲ್ಲಾ ರೂಮರ್’ ಎಂದಿದ್ದರು.
ಟ್ವೀಟ್ ನೋಡಿದ ಮೇಲೆ ಹಲವು ಶ್ರುತಿ ವಿರುದ್ಧ ಟ್ವೀಟ್ ಮಾಡಿದ್ದರು. ಇದಕ್ಕೆ ಜಗ್ಗೇಶ್ ಕೂಡಾ ಪ್ರತಿಕ್ರಿಯಿಸಿದ್ದು ಈ ರೀತಿ ಪರಭಾಷಾ ನಟಿಯೊಬ್ಬರನ್ನು ಕಾಡಿ ಬೇಡಿ ಕನ್ನಡಕ್ಕೆ ಕರೆತರುವ ನಮ್ಮವರ ಪರಭಾಷಾ ಮೋಹಕ್ಕೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಕನ್ನಡದಲ್ಲಿ ನಾಯಕಿಯರಿಗೆ ಕಮ್ಮಿಯೇ? ನಮ್ಮ ಕಾಲೇಜು ಹುಡುಗಿಯರ ಅಂದದ ಮುಂದೆ ಇವರೆಲ್ಲಾ ಕಾಲ ದೂಳಿಗೆ ಸಮ. ಇವರೆಲ್ಲಾ ಬಣ್ಣ ತೆಗೆದು ಬಂದರೆ ಯುವಕರು ಮಾರು ದೂರ ಓಡುತ್ತಾರೆ. ಇವರಿಗೆಲ್ಲಾ ಕನ್ನಡಿಗರ ದುಡ್ಡು ಬೇಕು. ಕನ್ನಡ ಬೇಡ. ನಮ್ಮಲ್ಲೇ ಅನೇಕರು ಇರುವಾಗ ಪರಭಾಷಾ ನಟಿಯರ ಮನೆ ಮುಂದೆ ಭಿಕ್ಷೆ ಬೇಡುವುದೇಕೆ?’ ಎಂದು ಜಗ್ಗೇಶ್ ಸರಣಿ ಟ್ವೀಟ್ ಗಳ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ