Select Your Language

Notifications

webdunia
webdunia
webdunia
webdunia

ದಿಗ್ವಿಜಯ್ ಸಿಂಗ್ ಬಳಿಕ ಇನ್ನೊಬ್ಬ ಕಾಂಗ್ರೆಸ್ ನಾಯಕನಿಂದ ಪ್ರಧಾನಿ ಮೋದಿ ವಿರುದ್ಧ ಆಕ್ಷೇಪಾರ್ಹ ಟೀಕೆ

ದಿಗ್ವಿಜಯ್ ಸಿಂಗ್ ಬಳಿಕ ಇನ್ನೊಬ್ಬ ಕಾಂಗ್ರೆಸ್ ನಾಯಕನಿಂದ ಪ್ರಧಾನಿ ಮೋದಿ ವಿರುದ್ಧ  ಆಕ್ಷೇಪಾರ್ಹ ಟೀಕೆ
ನವದೆಹಲಿ , ಸೋಮವಾರ, 18 ಸೆಪ್ಟಂಬರ್ 2017 (10:09 IST)
ನವದೆಹಲಿ: ಇತ್ತೀಚೆಗಷ್ಟೇ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅಸಭ್ಯ ಪದ ಬಳಸಿ ಟ್ವೀಟ್ ಮಾಡಿದ್ದು ಭಾರೀ ಟೀಕೆಗೆ ಗುರಿಯಾಗಿತ್ತು. ಇದೀಗ ಮತ್ತೊಬ್ಬ ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಸರದಿ.

 
ಮಾಜಿ ಸಚಿವರೂ ಆಗಿರುವ ತಿವಾರಿ ತಮ್ಮ ಟ್ವಿಟರ್ ಪೇಜ್ ನಲ್ಲಿ ಮೋದಿ ಜನ್ಮ ದಿನದಂದೇ ಅಸಭ್ಯ ಪದ ಬಳಸಿ ಟ್ವೀಟ್ ಮಾಡಿದ್ದಾರೆ. ಪ್ರಧಾನಿ ಮೋದಿ ದೇಶ ಭಕ್ತಿ ಬಗ್ಗೆ ಮಹಾತ್ಮಾ ಗಾಂಧಿಯವರಿಂದ ಕಲಿಯಬೇಕಾಗಿಲ್ಲ ಎಂಬ ಟ್ವೀಟ್ ಗೆ ಪ್ರತಿಕ್ರಿಯಿಸುವಾಗ ತಿವಾರಿ ಎಲ್ಲೆ ಮೀರಿದ್ದಾರೆ.

ನರೇಂದ್ರ ಮೋದಿ ಹೇಗೆ ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ ಗೊತ್ತಿದೆ. ಅವರಿಗೆ ಮಹಾತ್ಮಾ ಗಾಂಧಿಯೂ ದೇಶಭಕ್ತಿ ಕಲಿಸಲಾಗದು ಎಂಬ ಅರ್ಥದಲ್ಲಿ ಟ್ವೀಟ್ ಮಾಡಿರುವ ತಿವಾರಿ ಕಟು ಪದ ಬಳಸಿದ್ದಾರೆ. ಅಲ್ಲದೆ ವಿದೇಶ ಪ್ರವಾಶ ಮಾಡಿದ್ದಾಗ ಮೋದಿ ಅಲ್ಲಿನ ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆ ಎಂದು ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ. ತಿವಾರಿ ಈ ಟ್ವೀಟ್ ಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ದಕ್ಷಿಣ ಭಾರತದಲ್ಲೀಗ ಹುಯ್ಯೋ ಹುಯ್ಯೋ ಮಳೆರಾಯ!