Publish Date: Tue, 03 Oct 2017 (12:10 IST)
Updated Date: Tue, 03 Oct 2017 (12:12 IST)
ಬೆಂಗಳೂರು: ಗೀತಾ ವಿಷ್ಣು ಪ್ರಕರಣದಲ್ಲಿ ಸ್ಯಾಂಡಲ್ ವುಡ್ ನಟ ದೇವರಾಜ್ ಪುತ್ರ ಪ್ರಜ್ವಲ್ ದೇವರಾಜ್ ಹೆಸರು ಎಳೆದು ತಂದಿದ್ದಕ್ಕೆ ನಟ ಜಗ್ಗೇಶ್ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಪ್ರಜ್ವಲ್ ಮತ್ತು ಸ್ನೇಹಿತರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
‘ಯಾರೋ ಸಿರಿವಂತರ ಮಗ ಮಾಡಿದ ತಪ್ಪಿಗೆ ಇನ್ನೂ ಬೆಳೆಯಬೇಕಿರುವ ಮಕ್ಕಳ ಹೆಸರು ಹಾಳು ಮಾಡಬೇಡಿ’ ಎಂದು ಜಗ್ಗೇಶ್ ಪ್ರಜ್ವಲ್, ದಿಗಂತ್ ಪರವಾಗಿ ಮಾತನಾಡಿದ್ದಾರೆ.
ಅಷ್ಟೇ ಅಲ್ಲದೆ, ಆ ದಿನ ಪ್ರಜ್ವಲ್ ಚಿತ್ರೀಕರಣದಲ್ಲಿದ್ದ ಫೋಟೋವನ್ನೂ ಸಾಕ್ಷಿ ಸಮೇತ ತಮ್ಮ ಟ್ವಿಟರ್ ಪೇಜ್ ನಲ್ಲಿ ಪ್ರಕಟಿಸಿದ್ದಾರೆ. ಅಲ್ಲದೆ, ತಪ್ಪು ಸರಿಪಡಿಸುವಂತೆ ಮಾಧ್ಯಮಗಳಲ್ಲಿ ಮನವಿ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ನಟ ಪ್ರಜ್ವಲ್ ದೇವರಾಜ್ ತಮಗೆ ಬೆಂಬಲ ನೀಡಿದ ಜಗ್ಗೇಶ್ ಗೆ ಧನ್ಯವಾದ ಸಲ್ಲಿಸಿದ್ದಾರೆ. ಸತ್ಯಕ್ಕೆ ತಡವಾಗಿಯಾದರೂ ಜಯ ಸಿಕ್ಕಿಯೇ ಸಿಗುತ್ತದೆ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ
Krishnaveni
Publish Date: Tue, 03 Oct 2017 (12:10 IST)
Updated Date: Tue, 03 Oct 2017 (12:12 IST)