Publish Date: Mon, 02 Oct 2017 (11:54 IST)
Updated Date: Mon, 02 Oct 2017 (12:00 IST)
ಉದ್ಯಮಿ ಪುತ್ರ ಗೀತಾ ವಿಷ್ಣು ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ಮಗ ಪ್ರಣಾಮ್ ದೇವರಾಜ್`ಗೆ ಪೊಲೀಸರಿಂದ ನೋಟಿಸ್ ಬಂದಿರುವುದು ನಿಜ ಎಂದು ಹಿರಿಯ ನಟ ದೇವರಾಜ್ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮವೊಂದರ ಜೊತೆ ಮಾಧ್ಯಮವೊಂದರ ಜೊತೆ ಮಾತನಾಡಿರುವ ನಟ ದೇವರಾಜ್, ಅಪಘಾತದ ಸಂದರ್ಭ ಅಲ್ಲಿದ್ದ ಬಗ್ಗೆ ವಿವರಣೆ ಕೇಳಿ ಪೊಲೀಸರು ನೋಟಿಸ್ ನೀಡಿದ್ದಾರೆ. ಅಪಘಾತ ನಡೆದ ಸಂದರ್ಭ ನನ್ನ ಮಗ ಅಲ್ಲಿರಲಿಲ್ಲ. ಅಪಘಾತದ ಸುದ್ದಿ ಕೇಳಿ ಅಲ್ಲಿಗೆ ಬಂದಿದ್ದರು. ಪೊಲೀಸರು ವಿವರಣೆ ಕೇಳಿ ನೋಟಿಸ್ ನೀಡಿದ್ದಾರೆ. ಪೊಲೀಸರ ಮುಂದೆ ಸತ್ಯ ಹೇಳುತ್ತೇವೆಂದು ದೇವರಾಜ್ ಹೇಳಿದ್ದಾರೆ.
ಸೆ.29ರಂದು ಜಯನಗರದ ಸೌತ್ ಎಂಡ್ ಸರ್ಕಲ್ ಬಳಿ ಗೀತಾ ವಿಷ್ಣು ಕಾರನ್ನ ಅಡ್ಡಾ ದಿಡ್ಡಿ ಚಲಾಯಿಸಿ ಅಪಘಾತ ಎಸಗಿದ್ದರು. ಈ ಸಂದರ್ಭ ಕಾರಿನಲ್ಲಿ ಇಬ್ಬರು ಸ್ಯಾಂಡಲ್ ವುಡ್ ನಟರಿದ್ದರೆಂಬ ಸ್ಥಳೀಯರ ಮಾಹಿತಿ ಆಧರಿಸಿ ಪೊಲೀಸರು ನೋಟಿಸ್ ನೀಡಿದ್ದಾರೆ. ರಕ್ತ, ಮೂತ್ರದ ಮಾದರಿ ಪರೀಕ್ಷೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ