Publish Date: Sat, 30 Sep 2017 (11:41 IST)
Updated Date: Sat, 30 Sep 2017 (11:45 IST)
ಬೆಂಗಳೂರು: ನಿನ್ನೆ ಬಿಡುಗಡೆಯಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ತಾರಕ ಸಿನಿಮಾಗೂ ಪೈರಸಿ ಕಾಟ ಶುರುವಾಗಿದೆ. ನಿನ್ನೆ ಸಿನಿಮಾ ಥಿಯೇಟರ್ ನಲ್ಲಿ ಪ್ರದರ್ಶನವಾಗುತ್ತಿರುವಂತೆ ಫೇಸ್ ಬುಕ್ ನಲ್ಲಿ ಲೈವ್ ಆಗಿ ಪ್ರಸಾರವಾಗಿದೆ.
ಮೊದಲ ದಿನವೇ ಪೈರಸಿ ಹಾವಳಿಯಾಗಿದ್ದು, ತೆರೆ ಕಂಡ ಮೊದಲ ದಿನವೇ ಫೇಸ್ ಬುಕ್ ನಲ್ಲಿ ಲೈವ್ ಆಗಿ ಪ್ರದರ್ಶನವಾಗಿದೆ. ಇದಕ್ಕೆ ದರ್ಶನ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಭರ್ಜರಿ, ಹೆಬ್ಬುಲಿ ಚಿತ್ರಗಳೂ ಇದೇ ಸಮಸ್ಯೆ ಎದುರಿಸಿತ್ತು. ಆಗಲೇ ನಟ ಜಗ್ಗೇಶ್ ಸೇರಿದಂತೆ ಚಿತ್ರರಂಗದ ಹಲವರು ನಿರ್ಮಾಪಕರ ಜೇಬಿಗೆ ಕತ್ತರಿ ಹಾಕಬೇಡಿ ಎಂದು ಮನವಿ ಮಾಡಿದ್ದರು. ಹಾಗಿದ್ದರೂ ಕಿಡಿಗೇಡಿಗಳ ಕೃತ್ಯ ಮುಂದುವರಿದಿದೆ. ತಾರಕ್ ಸಿನಿಮಾ ನಿರ್ದೇಶಕ ಪ್ರಕಾಶ್ ಖಾಸಗಿ ವಾಹಿನಿಯಲ್ಲಿ ಮಾತನಾಡುತ್ತಾ ನಮ್ಮ ಪ್ರಯತ್ನಕ್ಕೆ ನೀರು ಸುರಿಯಬೇಡಿ ಎಂದು ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ