Publish Date: Thu, 31 Aug 2017 (11:09 IST)
Updated Date: Thu, 31 Aug 2017 (11:13 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾಂಗ್ರೆಸ್ ಸೇರುತ್ತಾರೆಂಬ ವದಂತಿಗಳು ಬಂದ ಬೆನ್ನಲ್ಲೇ ಬಿಜೆಪಿ ಶಾಸಕ ಸಿಟಿ ರವಿ ಪ್ರತಿಕ್ರಿಯಿಸಿದ್ದು, ದರ್ಶನ್ ಮೂರ್ಖರಲ್ಲ ಎಂದು ನಂಬಿದ್ದೇನೆ ಎಂದಿದ್ದಾರೆ.
‘ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಈ ರಾಜ್ಯದ ಜನರ ಬೆಂಬಲ ಬಿಜೆಪಿಯೊಂದಿಗಿದೆ. ಹಾಗಾಗಿ ಮುಳುಗತ್ತಿರುವ ಹಡಗನ್ನು ಏರುವ ಮೂರ್ಖತನ ದರ್ಶನ್ ಮಾಡಲ್ಲ ಎಂಬ ನಂಬಿಕೆಯಿದೆ’ ಎಂದಿದ್ದಾರೆ.
ಬಿಜೆಪಿ ಪಕ್ಷಕ್ಕೆ ಸಾಮಾನ್ಯ ಕಾರ್ಯಕರ್ತರೇ ಸ್ಟಾರ್ ಗಳು. ಹಾಗಾಗಿ ಯಾವ ಸ್ಟಾರ್ ಗಳು ಯಾವ ಪಕ್ಷ ಸೇರಿದರೂ ನಮಗೆ ಸಮಸ್ಯೆಯಲ್ಲ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಶಾಸಕ ರವಿ ಉತ್ತರಿಸಿದ್ದಾರೆ. ದರ್ಶನ್ ಕಾಂಗ್ರೆಸ್ ಸೇರುವ ಬಗ್ಗೆ ಮಾತುಕತೆ ನಡೆದಿದೆ ಎಂಬ ಸುದ್ದಿ ದಟ್ಟವಾಗಿದ್ದು, ಇದನ್ನು ಸ್ವತಃ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಒಪ್ಪಿಕೊಂಡಿದ್ದಾರೆ.