Select Your Language

Notifications

webdunia
webdunia
webdunia
Sunday, 13 April 2025
webdunia

ಏನೋ ಹೇಳಲು ಹೋಗಿ ಇನ್ನೇನೋ ಮಾಡಿಕೊಂಡ ನಟ ಜೆಕೆ!

ಜಯರಾಂ ಕಾರ್ತಿಕ್
ಬೆಂಗಳೂರು , ಮಂಗಳವಾರ, 3 ಅಕ್ಟೋಬರ್ 2017 (10:48 IST)
ಬೆಂಗಳೂರು: ಅಶ್ವಿನಿ ನಕ್ಷತ್ರ ಧಾರವಾಹಿ ಮೂಲಕ ಜನರಿಗೆ ಸೂಪರ್ ಸ್ಟಾರ್ ಜೆಕೆ ಎಂದೇ ಪರಿಚಿತರಾದ ನಟ ಜಯರಾಂ ಕಾರ್ತಿಕ್ ಸುಖಾ ಸುಮ್ಮನೇ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.


 
ಇದೆಲ್ಲಾ ಶುರುವಾಗಿದ್ದು ಜೆಕೆ ಹಾಕಿದ ಒಂದು ಫೇಸ್ ಬುಕ್ ಪೋಸ್ಟ್ ನಿಂದ. ಹಿಂದಿಯ ಪೌರಾಣಿಕ ಧಾರವಾಹಿಯೊಂದರಲ್ಲಿ ರಾವಣನ ಪಾತ್ರ ಮಾಡಿದ್ದ ಜೆಕೆಯನ್ನು ಪತ್ರಿಕೆಯೊಂದು ಹಿಂದಿ ಧಾರವಾಹಿಗಳಲ್ಲಿ ನಂ.1 ರಾವಣ ಎಂದು ಮೆಚ್ಚಿ ಬರೆದಿತ್ತು.

ಇದನ್ನು ಉಲ್ಲೇಖಿಸಿ ಜೆಕೆ ತಮ್ಮ ಫೇಸ್ ಬುಕ್ ನಲ್ಲಿ ‘ನನ್ನನ್ನು ಗುರುತಿಸಿ ಅವಕಾಶ ಕೊಟ್ಟ ಬಾಲಿವುಡ್ ಗೆ ಧನ್ಯವಾದಗಳು. ಕನ್ನಡದಲ್ಲಿ ಯಾವ ಪೌರಾಣಿಕ ಪಾತ್ರಕ್ಕೆ ನನ್ನನ್ನು ರಿಜೆಕ್ಟ್ ಮಾಡಿದರೋ ಅದೇ ಪಾತ್ರದಲ್ಲಿ ಬಾಲಿವುಡ್ ನನ್ನನ್ನು ಗುರುತಿಸಿತು. ಸಣ್ಣ ಕೊಳದಲ್ಲಿರುವುದಕ್ಕಿಂತಲೂ ಸಮುದ್ರದಲ್ಲಿರುವುದನ್ನು ಇಷ್ಟಪಡುತ್ತೇನೆ’ ಎಂದು ಬರೆದಿದ್ದರು.

ಜೆಕೆಯ ಈ ಮಾತನ್ನು ತಪ್ಪಾಗಿ ಅರ್ಥೈಸಿದ ಅಭಿಮಾನಿಗಳು ಸಮುದ್ರ ಎಂದರೆ ಬಾಲಿವುಡ್, ಕೊಳ ಎಂದರೆ ಸ್ಯಾಂಡಲ್ ವುಡ್ ಎಂದು ಜೆಕೆ ಮೇಲೆ ಮುಗಿಬಿದ್ದರು. ಕೊನೆಗೆ ನಟ ಜೆಕೆ ತಮ್ಮ ಪೋಸ್ಟ್ ಗೆ ಸ್ಪಷ್ಟನೆ ಕೊಟ್ಟಿದ್ದು, ಸಮುದ್ರ ಎಂದರೆ ಕಷ್ಟ, ಕಷ್ಟವನ್ನು ಈಜಿ ಮೇಲೇಳಲು ಇಷ್ಟಪಡುತ್ತೇನೆ. ಕೊಳ ಎಂದರೆ ಆರಾಮವಾಗಿರಬಹುದು. ಅಲ್ಲಿ ಸವಾಲುಗಳಿರುವುದಿಲ್ಲ ಎಂಬ ಅರ್ಥದಲ್ಲಿ ಈ ಮಾತು ಹೇಳಿದ್ದೇನೆ ಎಂದು ಸ್ಪಷ್ಟನೆ ಕೊಡುವಲ್ಲಿಗೆ ಪ್ರಕರಣ ಅಂತ್ಯ ಕಂಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

‘ಪ್ರಶಸ್ತಿ ವಾಪಸ್ ಮಾಡಲು ನಾನೇನು ಮೂರ್ಖನೇ?’