Publish Date: Tue, 03 Oct 2017 (11:15 IST)
Updated Date: Tue, 03 Oct 2017 (11:19 IST)
ಬೆಂಗಳೂರು: ದಿ. ಆದಿಕೇಶವುಲು ಮೊಮ್ಮಗ ಗೀತಾ ವಿಷ್ಣು ಕಾರು ಅಪಘಾತ ಪ್ರಕರಣವನ್ನು ಸಿಸಿಬಿ ಪೊಲೀಸರು ತನಿಖೆ ನಡೆಸಲಿದ್ದಾರೆ ಎಂದು ಪೊಲೀಸ್ ಆಯುಕ್ತ ಟಿ ಸುನಿಲ್ ಕುಮಾರ್ ಮಾಧ್ಯಮಗಳಿಗೆ ಹೇಳಿದ್ದಾರೆ.
ಸಿಸಿಬಿ ಅಧಿಕಾರಿ ವೆಂಕಟೇಶ್ ಪ್ರಸನ್ನ ನೇತೃತ್ವದ ತಂಡ ತನಿಖೆ ನಡೆಸಲಿದೆ. ಸೌತ್ ಎಂಡ್ ವೃತ್ತದ ಬಳಿ ನಡುರಾತ್ರಿ ಪಾರ್ಟಿ ಮುಗಿಸಿ ಬರುತ್ತಿದ್ದ ಗೀತಾ ವಿಷ್ಣು ಕಾರು ಫೂಟ್ ಪಾತ್ ಮೇಲೆ ಹರಿದು ದಾಂಧಲೆ ಎಬ್ಬಿಸಿದ್ದಲ್ಲದೆ, ಆರೋಪಿ ತಲೆಮರೆಸಿಕೊಂಡಿದ್ದ.
ಈ ಪ್ರಕರಣದಲ್ಲಿ ಸ್ಯಾಂಡಲ್ ವುಡ್ ನ ಕೆಲವು ನಟರ ಹೆಸರು ಕೇಳಿಬಂದಿತ್ತು. ಆದರೆ ಅವರೆಲ್ಲರೂ ಸ್ನೇಹಿತರಷ್ಟೇ ಎಂದು ನಂತರ ಸ್ಪಷ್ಟನೆಯನ್ನೂ ಕೊಡಲಾಯಿತು. ಅಪಘಾತಕ್ಕೀಡಾದ ಗೀತಾ ವಿಷ್ಣು ಕಾರಿನಲ್ಲಿ ಗಾಂಜಾ ಪತ್ತೆಯಾಗಿತ್ತು. ಅಲ್ಲದೆ, ಗೀತಾ ವಿಷ್ಣು ಮದ್ಯ ಸೇವಿಸಿ ವಾಹನ ಚಲಾಯಿಸುತ್ತಿದ್ದರು ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ