Select Your Language

Notifications

webdunia
webdunia
webdunia
webdunia

ಮತ್ತೆ ಎಡವಟ್ಟು ಮಾಡಿದ ರಾಹುಲ್ ಗಾಂಧಿ

ರಾಹುಲ್ ಗಾಂಧಿ
ನವದೆಹಲಿ , ಭಾನುವಾರ, 17 ಸೆಪ್ಟಂಬರ್ 2017 (12:24 IST)
ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಆಗಾಗಾ ಸಾರ್ವಜನಿಕವಾಗಿ ತಪ್ಪಾಗಿ ಮಾತನಾಡಿ ತಮಾಷೆಗೊಳಗಾಗುತ್ತಾರೆ. ಇದೀಗ ಮತ್ತೆ ಅಂತಹದ್ದೇ ಎಡವಟ್ಟು ಮಾಡಿದ್ದಾರೆ.

 
ಫೈವ್ ಸ್ಟಾರ್ ರ್ಯಾಂಕಿಗೆ ಬಡ್ತಿ ಪಡೆದ ಏಕೈಕ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಐಎಎಫ್ ಮಾರ್ಷಲ್ ಅರ್ಜುನ್ ಸಿಂಗ್ ನಿಧನಕ್ಕೆ ಸಂತಾಪ ಸೂಚಿಸಿ ಟ್ವಿಟರ್ ನಲ್ಲಿ ರಾಹುಲ್ ಸಂದೇಶ ಬರೆದಿದ್ದರು.

ಆದರೆ ಸಂದೇಶ ಬರೆಯುವಾಗ ತಪ್ಪು ಮಾಡಿದ್ದಾರೆ. ಮಾರ್ಷಲ್ ಆಫ್ ಇಂಡಿಯನ್ ಏರ್ ಫೋರ್ಸ್ ಎನ್ನುವ ಬದಲು ಏರ್ ಮಾರ್ಷಲ್ ಎಂದು ಬರೆದಿದ್ದಾರೆ. ಮಾರ್ಷಲ್ ಆಫ್ ಇಂಡಿಯನ್ ಏರ್ ಫೋರ್ಸ್ ಹುದ್ದೆಗೆ ಐದು ಸ್ಟಾರ್ ಇರುತ್ತದೆ. ಆದರೆ ಏರ್ ಮಾರ್ಷಲ್ ಹುದ್ದೆಗೆ ಮೂರು ಸ್ಟಾರ್ ಇರುತ್ತದೆ. ಹೀಗಾಗಿ ರಾಹುಲ್ ಗಾಂಧಿ ಮಾಡಿದ ಈ ಎಡವಟ್ಟು ಮತ್ತೊಮ್ಮೆ ಅವರ ವಿರೋಧಿಗಳ ಟೀಕೆಗೆ ಗುರಿಯಾಗಿದೆ.

ಇದನ್ನೂ ಓದಿ.. ಜನ್ಮ ದಿನದಂದು ನರ್ಮದಾ ಅಣೆಕಟ್ಟು ಉದ್ಘಾಟಿಸಲಿರುವ ಪ್ರಧಾನಿ ಮೋದಿ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಜೀವನದಿ ಕಾವೇರಿ ತೀರ್ಥೋದ್ಬವಕ್ಕೆ ಸಮಯ ನಿಗದಿ