Publish Date: Tue, 17 Oct 2017 (08:43 IST)
Updated Date: Tue, 17 Oct 2017 (08:44 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಧೋನಿ ಪುತ್ರಿ ಜೀವಾ ಇದೀಗ ಭಾರೀ ಫೇಮಸ್ಸಾಗಿದ್ದಾಳೆ. ಇತ್ತೀಚೆಗೆ ನಾಯಕ ಕೊಹ್ಲಿ ಜತೆ ಜೀವಾ ವಿಡಿಯೋ ವೈರಲ್ ಆಗಿತ್ತು. ಇದೀಗ ಅಪ್ಪನ ಜತೆಗಿನ ಫೋಟೋ ವೈರಲ್ ಆಗಿದೆ.
ಭಾನುವಾರ ಮುಂಬೈನ ಅಂಧೇರಿ ಸ್ಪೋರ್ಟ್ಸ್ ಕ್ಲಬ್ ನಲ್ಲಿ ನಡೆದ ಸಹಾಯಾರ್ಥ ಫುಟ್ ಬಾಲ್ ಪಂದ್ಯದಲ್ಲಿ ಧೋನಿ ಮೈದಾನದಲ್ಲಿ ಸುಸ್ತಾಗಿ ಕುಳಿತಿದ್ದಾಗ ಬಂದ ಜೀವಾ ಅಪ್ಪನಿಗೆ ನೀರಿನ ಬಾಟಲ್ ನೀಡಿ ನೀರು ಕುಡಿಸಿದ್ದು ನೆರೆದಿದ್ದವರ ಗಮನ ಸೆಳೆದಿದೆ.
ಸ್ವಲ್ಪ ಹೊತ್ತು ಅಪ್ಪನ ಜತೆ ಮಾತನಾಡಿ ನಂತರ ಅಮ್ಮನ ಕೈ ಹಿಡಿದು ಮೈದಾನದಿಂದ ತೆರಳಿದ್ದಾಳೆ ಜೀವಾ. ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ