Publish Date: Thu, 19 Oct 2017 (10:48 IST)
Updated Date: Thu, 19 Oct 2017 (10:50 IST)
ನವದೆಹಲಿ: ನಾಯಕರಾಗಿದ್ದಾಗ ಧೋನಿ ಯಾವುದೇ ಟೂರ್ನಮೆಂಟ್ ಗೆದ್ದ ಮೇಲೆ ಪ್ರಶಸ್ತಿ ಟ್ರೋಫಿಯನ್ನು ಸ್ವೀಕರಿಸಿದ ಬಳಿಕ ಯುವ ಕ್ರಿಕೆಟಿಗರಿಗೆ ಹಸ್ತಾಂತರಿಸುತ್ತಿದ್ದರು. ಅವರು ಹೀಗೇಕೆ ಮಾಡುತ್ತಿದ್ದರು ಗೊತ್ತಾ?
ಸ್ವತಃ ಧೋನಿ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ. ಪ್ರಶಸ್ತಿಯನ್ನು ಯುವಕರಿಗೆ ಹಸ್ತಾಂತರಿಸುವುದರ ಹಿಂದೆ ಒಂದು ಉದ್ದೇಶವಿದೆ ಎಂದು ಧೋನಿ ಹೇಳಿದ್ದಾರೆ.
ಆ ಸರಣಿಯಲ್ಲಿ ಯಾರಾದರೂ ಯುವ ಆಟಗಾರರು ಚೆನ್ನಾಗಿ ಆಡಿದ್ದರೆ ಅವರಿಗೆ ಟ್ರೋಫಿ ಹಸ್ತಾಂತರಿಸುತ್ತಿದ್ದೆ. ಅವರಿಗೆ ಇದೊಂದು ಪ್ರೇರಣೆಯಾಗಲಿ. ಮುಂದಿನ ಸರಣಿಯಲ್ಲೂ ಚೆನ್ನಾಗಿ ಆಡಲಿ ಎನ್ನುವ ಉದ್ದೇಶದಿಂದ ಹೀಗೆ ಮಾಡುತ್ತಿದ್ದೆ ಎಂದು ಧೋನಿ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ