Publish Date: Thu, 19 Oct 2017 (11:05 IST)
Updated Date: Thu, 19 Oct 2017 (11:08 IST)
ಮುಂಬೈ: ಟೀಂ ಇಂಡಿಯಾದಲ್ಲಿ ಬ್ಯಾಟಿಂಗ್ ಕ್ರಮಾಂಕ ಪ್ರಯೋಗಕ್ಕೆ ತುತ್ತಾಗಿ ಮಂಕಾಗಿದ್ದ ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ನ್ಯೂಜಿಲೆಂಡ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಆರಂಭಿಕನಾಗಿ ಬಡ್ತಿ ಸಿಕ್ಕಿದ್ದೇ ತಡ, ಮತ್ತೆ ಮೇಲೆದ್ದಿದ್ದಾರೆ.
ಆರಂಭಿಕ ಸ್ಥಾನ ವಂಚಿತರಾಗಿದ್ದ ರಾಹುಲ್ ಶ್ರೀಲಂಕಾ, ಆಸ್ಟ್ರೇಲಿಯಾ ಸರಣಿಯಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದು ವೈಫಲ್ಯ ಅನುಭವಿಸಿದ್ದರು. ಇದರಿಂದಾಗಿ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಆಯ್ಕೆಯಾಗಿರಲಿಲ್ಲ.
ಇದೀಗ ಅಭ್ಯಾಸ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದು ಅರ್ಧಶತಕ ದಾಖಲಿಸಿದ ರಾಹುಲ್, ಇನ್ನೊಬ್ಬ ಕನ್ನಡಿಗ ಕರುಣ್ ನಾಯರ್ ಜತೆಗೂಡಿ ತಂಡಕ್ಕೆ ಗೆಲುವು ಕೊಡಿಸಿದ್ದಾರೆ. ಇದನ್ನು ನೋಡಿದ ಮೇಲಾದರೂ ಟೀಂ ಇಂಡಿಯಾ ಚಿಂತಕರ ಚಾವಡಿ ರಾಹುಲ್ ಗೆ ಮರಳಿ ಆರಂಭಿಕ ಸ್ಥಾನ ಕೊಡುವುದೋ ನೋಡಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ