Publish Date: Wed, 15 Nov 2017 (08:36 IST)
Updated Date: Wed, 15 Nov 2017 (08:38 IST)
ಚೆನ್ನೈ: ಐಪಿಎಲ್ ನ ಮುಂದಿನ ಆವೃತ್ತಿಗೆ ಮ್ಯಾಚ್ ಫಿಕ್ಸಿಂಗ್ ನಿಷೇಧ ಶಿಕ್ಷೆ ಮುಗಿಸಿ ಮರಳುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ಹಳೇ ನಾಯಕ ಧೋನಿಯನ್ನು ಉಳಿಸಿಕೊಳ್ಳಲು ಉತ್ಸುಕವಾಗಿದೆ ಎನ್ನಲಾಗಿದೆ.
ಐಪಿಎಲ್ ಆಡಳಿತ ಮಂಡಳಿಯ ನಿಯಮದ ಪ್ರಕಾರ ಎಲ್ಲಾ ತಂಡಗಳಿಗೂ ಮೂವರು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗುವುದು. ಅದರಂತೆ ಚೆನ್ನೈ ಧೋನಿ ಮತ್ತು ಆರ್ ಅಶ್ವಿನ್ ಅಲ್ಲದೆ ವಿದೇಶಿ ಆಟಗಾರ ಫಾ ಡು ಪ್ಲೆಸಿಸ್ ರನ್ನು ಉಳಿಸಿಕೊಳ್ಳಲು ಮುಂದಾಗಿದ್ದರೆ, ಸುರೇಶ್ ರೈನಾಗೆ ಕೊಕ್ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಸದ್ಯ ಫಿಟ್ನೆಸ್ ಕೊರತೆಯಿಂದಾಗಿ ಟೀಂ ಇಂಡಿಯಾದಲ್ಲೂ ಸ್ಥಾನ ಕಳೆದುಕೊಂಡಿರುವ ರೈನಾಗೆ ಇದು ಭಾರೀ ಆಘಾತ ನೀಡಲಿದೆ. ಚೆನ್ನೈ ಸೂಪರ್ ಕಿಂಗ್ಸ್ ಇರುವವರೆಗೆ ರೈನಾ ಕೂಡಾ ಅದೇ ತಂಡದಲ್ಲಿದ್ದರು. ಆದರೆ ಈಗ ರೈನಾರನ್ನು ತಂಡಕ್ಕೆ ಸೇರಿಸಿಕೊಳ್ಳಲು ಸಿಎಸ್ ಕೆಗೆ ಆಸಕ್ತಿಯಿಲ್ಲ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ