Publish Date: Fri, 10 Nov 2017 (09:34 IST)
Updated Date: Fri, 10 Nov 2017 (09:36 IST)
ನವದೆಹಲಿ: ಟೀಂ ಇಂಡಿಯಾದಲ್ಲಿ ವಿಕೆಟ್ ಕೀಪರ್ ಧೋನಿ ನಿವೃತ್ತಿಗೆ ಮಾಜಿ ಕ್ರಿಕೆಟಿಗರು ಒತ್ತಾಯಿಸುತ್ತಿರುವ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಕೋಚ್ ರವಿ ಶಾಸ್ತ್ರಿ ಕೆಲವರು ಧೋನಿಯನ್ನು ಕಂಡರೆ ಆಗದು ಎಂದು ತಿರುಗೇಟು ನೀಡಿದ್ದಾರೆ.
‘ಕೆಲವರು ಧೋನಿ ವೃತ್ತಿ ಜೀವನ ಕೊನೆಗೊಳ್ಳುವುದನ್ನೇ ಕಾಯುತ್ತಿದ್ದಾರೆ. ಧೋನಿ ಒಬ್ಬ ಟೀಂ ಮ್ಯಾನ್. ಅದಕ್ಕೇ ಕೆಲವರಿಗೆ ಅವರನ್ನು ಕಂಡರೆ ಹೊಟ್ಟೆಯುರಿ. ಅವರ ವೃತ್ತಿ ಜೀವನ ಯಾವಾಗ ಕೊನೆಗೊಳ್ಳುತ್ತದೋ ಎಂದು ಕಾಯುತ್ತಿದ್ದಾರೆ’ ಎಂದು ರವಿಶಾಸ್ತ್ರಿ ಟೀಕಾಕಾರರಿಗೆ ಖಾರವಾಗಿ ತಿರುಗೇಟು ನೀಡಿದ್ದಾರೆ.
‘ಕೆಲವರು ಧೋನಿ ಕೆಲವು ಕೆಟ್ಟ ದಿನಗಳನ್ನು ಎದುರಿಸುವುದನ್ನೇ ಕಾಯುತ್ತಿದ್ದಾರೆ. ಆದರೆ ಧೋನಿಯಂತಹ ಶ್ರೇಷ್ಠ ಆಟಗಾರರು ಅವರ ವೃತ್ತಿ ಜೀವನವನ್ನು ಅವರೇ ನಿರ್ಧರಿಸುತ್ತಾರೆ. ಇಂತಹ ಟೀಕೆಗಳೆಲ್ಲಾ ನಮಗೆ ಅನ್ವಯವಾಗುವುದಿಲ್ಲ. ನಮ್ಮ ಧೋನಿ ಎಲ್ಲಿ ಸಲ್ಲಬೇಕು ಎಂದು ನಮಗೆ ಗೊತ್ತಿದೆ’ ಎಂದು ರವಿಶಾಸ್ತ್ರಿ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ